ಸೋಮವಾರ, ಜೂನ್ 14, 2021
22 °C
ಕ್ಷೌರ ಮಾಡಲು ನಿರಾಕರಣೆ

ತಹಶೀಲ್ದಾರ್‌ಗೆ ದಲಿತರ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮ­ದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸ­ಲಾಗುತ್ತಿದೆ ಎಂದು ದಲಿತ ಮುಖಂಡರು ತಹಶೀಲ್ದಾರ್ ಏಜಾಜ್ ಬೇಗ್ ಅವರಿಗೆ ಬುಧವಾರ ದೂರು ನೀಡಿದರು.ತಮ್ಮ ಸಮುದಾಯದವರಿಗೆ ಕ್ಷೌರ ಮಾಡುವಂತೆ ವಿನಂತಿಸಿದರೂ ನಿರಾಕರಿ­ಸು­ತ್ತಿದ್ದಾರೆ. ಆದ್ದರಿಂದ ತಹಶೀಲ್ದಾರರು ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸ­ಬೇಕೆಂದು ಎಂದು ದಲಿತ ಮುಖಂಡ ಎಚ್.ಬುಳ್ಳಪ್ಪ ಮನವಿ ಸಲ್ಲಿಸಿದರು.‘ದಲಿತರಿಗೆ ಕ್ಷೌರ ಮಾಡಿದರೆ ತಾವು ಕ್ಷೌರ ಮಾಡಿಸಿಕೊಳ್ಳುವುದಿಲ್ಲ ಎಂದು ಸವರ್ಣೀಯರು ಹೇಳಿದ್ದಾರೆ ಎಂಬ ಕಾರಣ ನೀಡಿ ಹಡಪದ ಸಮಾಜದವರು ಕ್ಷೌರ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ದಲಿತರು ಕ್ಷೌರಕ್ಕೆ ಕೊಟ್ಟೂರು, ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗೆ ಹೋಗಬೇಕಾಗಿದೆ’ ಎಂದು ಬುಳ್ಳಪ್ಪ ವಿವರಿಸಿದರು. ಮನವಿ ಆಲಿಸಿದ ಏಜಾಜ್‌ ಬೇಗ್‌ ಈ ಕುರಿತು ಪೊಲೀಸ್ ಅಧಿಕಾರಿ­ಗಳೊಂ­ದಿಗೆ ಚರ್ಚಿಸುವುದಾಗಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.