ಭಾನುವಾರ, ಜೂನ್ 20, 2021
23 °C

ತಹಶೀಲ್ದಾರ್‌ ವಿರುದ್ಧ ಬಂಜಾರ ಸಮಾಜ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದ ಹೊರವಲಯದ ಕಣಿವೆಮಾರಮ್ಮ ದೇವತೆಯ ದೇವಸ್ಥಾನದ ಬಳಿ ಬಂಜಾರ ಸಮುದಾಯದ ಸಭೆ ನಡೆಯುವ ವೇಳೆ ಚಿತ್ರದುರ್ಗ ತಹಶೀಲ್ದಾರ್‌ ತಂಡ ಏಕಾಏಕಿ ದಾಳಿ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬಂಜಾರ ಸೇವಾಲಾಲ್ ಸೇನೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದ ಸದಸ್ಯರು ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ತಹಶೀಲ್ದಾರ್ ಅವರ ಅನುಮತಿ ಪಡೆದು ಸಭೆ ನಡೆಸುತ್ತಿದ್ದರೂ ಕೂಡ ದಾಳಿ ಸರಿಯಲ್ಲ ಎಂದರು.ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸತೀಶ್‌ ಕುಮಾರ್, ಮುಖಂಡರಾದ ಎಂ.ರಂಗನಾಯ್ಕ, ಚಂಪಕಮಾಲಾ, ಶ್ರೀನಿವಾಸ ನಾಯ್ಕ, ನಾರಾಯಣ ನಾಯ್ಕ, ಡಾಕ್ಯಾನಾಯ್ಕ, ಮೀಟ್ಯಾನಾಯ್ಕ, ಸುಬ್ಬರಾಜ್, ರವಿನಾಯ್ಕ, ಗಂಗನಾಯ್ಕ, ಶಿವಕುಮಾರ ನಾಯ್ಕ, ಗೋವಿಂದ ನಾಯ್ಕ, ದಿನೇಶ್ ನಾಯ್ಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ತಪ್ಪಿತಸ್ಥರ ವಿರುದ್ಧ ಕ್ರಮ

ಬಂಜಾರ ಸಮುದಾಯದ ವಾರ್ಷಿಕ ಸಭೆ ನಡೆಸುವುದಾಗಿ 1 ಗಂಟೆ ಅನುಮತಿ ಪಡೆದಿದ್ದರು. ಆದರೆ, ಅಲ್ಲಿ ಇತರ ಸಮುದಾಯದ

ರಾಜಕೀಯ ಮುಖಂಡರಿರುವ ಸಭೆಯಂತೆ ಕಂಡುಬಂದಿತು. ಜತೆಗೆ ಮತದಾರರಿಗೆ ಆಮಿಷ ಒಡ್ಡುವ ಬಾಡೂಟ ಏರ್ಪಡಿಸಲಾಗಿತ್ತು. ಈ ವಿಷಯ ತಿಳಿದ ತಕ್ಷಣ ತಾಲ್ಲೂಕು ಚುನಾವಣಾಧಿಕಾರಿ ಕಪನಿಪತಿಶಾಸ್ತ್ರಿ, ವೀಡಿಯೊ ಸರ್ವೆಲೆನ್ಸ್ ಅಧಿಕಾರಿ ಕೆ.ರವಿಶಂಕರರೆಡ್ಡಿ, ಕಂದಾಯ ಅಧಿಕಾರಿ, ವೃತ್ತ ನಿರೀಕ್ಷಕರು ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಐಪಿಸಿ ಸೆಕ್ಷನ್ ೧೭೧ಬಿ ರನ್ವಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.

–ಟಿ.ಸಿ.ಕಾಂತರಾಜ್,  ತಹಶೀಲ್ದಾರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.