ಶುಕ್ರವಾರ, ಮೇ 14, 2021
32 °C

ತಹಶೀಲ್ದಾರ್ ದಾಳಿ: ಗುಟ್ಕಾ ಪ್ಯಾಕೆಟ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಜಿಲ್ಲಾ ಆರೋಗ್ಯ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳ ತಂಡವು ತಹಶೀಲ್ದಾರ್ ಕೇಶವ ಮೂರ್ತಿ ಅವರ ನೇತೃತ್ವದಲ್ಲಿ ಪಟ್ಟಣದ ಕೆಲವು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಭಾರಿ ಪ್ರಮಾಣದ ನಿಷೇಧಿತ ಗುಟ್ಕಾ ಪ್ಯಾಕೆಟ್‌ಗಳನ್ನು ಬುಧವಾರ ವಶಪಡಿಸಿಕೊಂಡರು.ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿದ ನಂತರವೂ ಪಟ್ಟಣದಲ್ಲಿ ಕದ್ದು-ಮುಚ್ಚಿ ಮಾರಾಟ ನಡೆಯುತ್ತಿದೆ. ಈ ಮಾಹಿತಿ ಆಧರಿಸಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿ ಗಳು ತಹಶೀಲ್ದಾರ್ ನೇತೃತ್ವದಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀಪಿದ ಮಾರಾಟ ಮಳಿಗೆ,ಬಿ.ಎಚ್. ರಸ್ತೆ ಮತ್ತು ಶಾನುಭೋಗರ ಬೀದಿ ಸೇರಿದಂತೆ ಪಟ್ಟಣದ ವಿವಿಧ ಭಾಗದ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಅಪಾರ ಪ್ರಮಾಣದ ಗುಟ್ಕಾ ಪ್ಯಾಕೆಟ್‌ಗಳನ್ನು ತುಂಬಿದ್ದ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡರು.`ಗುಟ್ಕಾ ಮಾರಾಟದ ವಿರುದ್ಧ ಜಿಲ್ಲೆಯಾದ್ಯಂತ ದಾಳಿ ನಡೆಸಲಾ ಗುತ್ತಿದೆ. ಪಟ್ಟಣದಲ್ಲಿ ವಶಪಡಿಸಿ ಕೊಂಡ ಪ್ಯಾಕೆಟ್‌ಗಳನ್ನು ಹಾಸನಕ್ಕೆ ತೆಗೆದುಕೊಂಡು ನಾಶಪಡಿಸಲಾ ಗುವುದು' ಎಂದು ಆರೋಗ್ಯ ಇಲಾಖೆಯ ಅಂಕಿತ ಅದಿಕಾರಿ ಡಾ. ರಾಜ್‌ಗೋಪಾಲ್ ತಿಳಿಸಿದರು.`ಪಟ್ಟಣದ ಅನೇಕ ಅಂಗಡಿಗಳಲ್ಲಿ ಗುಟ್ಕಾ ಮಾರಾಟದ ಮಾಹಿತಿ ಬರುತ್ತಿದೆ. ಇಂದು ನಡೆಸಿದ ದಾಳಿ ಎಚ್ಚರಿಕೆ ನೀಡುವ ಕ್ರಮವಾಗಿದೆ. ಮುಂದೆ ಗುಟ್ಕಾ ಮಾರಾಟ ಮತ್ತು ದಾಸ್ತಾನು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು' ಎಂದು ಎಚ್ಚರಿಸಿದರು.ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಮರುಳಪ್ಪ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ನಂಜುಂಡಪ್ಪ, ಆಹಾರ ಇಲಾಖೆಯ ಬಾಲಕೃಷ್ಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.