ಮಂಗಳವಾರ, ನವೆಂಬರ್ 12, 2019
28 °C

ತಹಶೀಲ್ದಾರ್ ದಾಳಿ 1906 ಸೀರೆಗಳ ವಶ

Published:
Updated:

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಹಶೀಲ್ದಾರ್ ಶಿವಕುಮಾರ ಕವಲೆತ್ತು ಗ್ರಾಮದಲ್ಲಿನ ಮನೆಯೊಂದರ ಮೇಲೆ ಶನಿವಾರ ದಾಳಿ ನಡೆಸಿ, ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಸೀರೆಗಳನ್ನು  ವಶಪಡಿಸಿಕೊಂಡಿದ್ದಾರೆ.ಕವಲೆತ್ತು ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣೆಪ್ಪ ಕೋಡೇರ ಎಂಬುವವರ ಮನೆಯಲ್ಲಿ ಈ ಸೀರೆಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಾಜಿ ಉಪ ಮೇಯರ್ ಆರ್. ಶಂಕರ ಹಾಗೂ ಕುಟುಂಬದವರ ಭಾವಚಿತ್ರ ಇರುವ 1906 ಸೀರೆಗಳನ್ನು ತಹಶೀಲ್ದಾರ್ ಮತ್ತು ಚುನಾವಣಾ ಸಿಬ್ಬಂದಿ ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ.

ಪ್ರತಿಕ್ರಿಯಿಸಿ (+)