ಸೋಮವಾರ, ಏಪ್ರಿಲ್ 19, 2021
33 °C

ತಾಂತ್ರಿಕತೆ ಅವಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ರೈತರು ಹೆಚ್ಚು ತಾಂತ್ರಿಕತೆ ಅಳವಡಿಸಿಕೊಂಡು ರೇಷ್ಮೆ ಬೆಳೆಯುವುದರ ಜತೆಗೆ, ಸರ್ಕಾರದ ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಾಲ್ಲೂಕು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ ತಿಳಿಸಿದರು.ಪಟ್ಟಣದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಬುಧವಾರ ಅರ್ಹ ಫಲಾನುಭವಿಗಳಿಗೆ ಸೋಲಾರ್ ದೀಪ ಮತ್ತು ಕೀಟನಾಶಕ ಪಂಪು ವಿತರಿಸಿ ಮಾತನಾಡಿದ ಅವರು, ರೇಷ್ಮೆ ಕೃಷಿ ಅನೇಕ ಕಾರ್ಮಿಕರಿಗೆ ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.ತಾಲ್ಲೂಕಿನಲ್ಲಿ ಒಟ್ಟು 1182 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ತಾಲ್ಲೂಕಿನಲ್ಲಿ 1893 ರೈತರು ರೇಷ್ಮೆ ಸಾಕಣೆಯಲ್ಲಿ ತೊಡಗಿದ್ದು, ಟೇಕಲ್ ಹೋಬಳಿಯಲ್ಲೇ 930 ರೈತರು ರೇಷ್ಮೆ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿ.ಎಸ್.ಆರ್ ಬೈವೋಲ್ಟೆನ್ ಸಂಕರಣ ತಳಿಗಳು ಹಾಗೂ ಚಿನ್ನ ಮಿಶ್ರತಳಿ ಅಪಾರ ಜನಪ್ರಿಯತೆ ಪಡೆದಿದೆ ಎಂದು ಹೇಳಿದರು.ಮುಖ್ಯ ಕಾರ್ಯ ನಿರ್ವಾಹಕ ಕಚೇರಿಯ ಶ್ರೀನಿವಾಸಯ್ಯ, ಪ್ರಗತಿ ಪರ ರೈತರಾದ ಟೇಕಲ್‌ನ ಮಾರ್ಕಂಡಯ್ಯ, ವೆಂಕಟೇಶ್ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.