ಶುಕ್ರವಾರ, ನವೆಂಬರ್ 22, 2019
20 °C

`ತಾಂತ್ರಿಕ ಜ್ಞಾನ ವೃದ್ಧಿಸಿಕೊಳ್ಳಿ'

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಕಲಿಯುವ ಉತ್ಸಾಹ, ಆಸಕ್ತಿ ಇದೆ. ವಿಕಾಸ ಹಂತದಲ್ಲಿರುವ ತಂತ್ರಜ್ಞಾನ ಮಾಹಿತಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ವೃದ್ಧಿಸಿಕೊಳ್ಳಬೇಕೆಂದು ಪ್ರೊ.ಕೆ.ಬಿ. ಷಡಕ್ಷರಪ್ಪ ಹೇಳಿದರು.ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ `ಪಿಸಿ ಟ್ರಬಲ್ ಶೂಟಿಂಗ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಶನ್' ಎಂಬ ಆರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಇದು ಮಾಹಿತಿ ತಂತ್ರಜ್ಞಾನ ಯುಗ, ಇಲ್ಲಿ ಕಲಿಯಲು ಸಾಕಷ್ಟಿದೆ, ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಅಲ್ಲಿನ ಮಾಹಿತಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಹೈ.ಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಾಬುರಾವ ಮಂಗಾಣೆ ಮಾತನಾಡಿ, ಈ ಕಾರ್ಯಾಗಾರವು ಗಣಕಯಂತ್ರದ ಹಾರ್ಡ್‌ವೇರ್/ಸಾಫ್ಟ್‌ವೇರ್‌ಗೆ ಅನ್ವಯವಾಗುವ ಎಲ್ಲ ರೀತಿಯ ತೊಂದರೆ ಹಾಗೂ ತೊಡಕುಗಳ ನಿವಾರಣೆ, ಸರಿಯಾದ ರೀತಿಯ ಚಾಲನೆ ಇದರಿಂದ ತಿಳಿಯುವುದು ಎಂದರು.ಗಣಕಯಂತ್ರದ ಅವಶ್ಯಕತೆ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿ, ಇದು ಉಪಯುಕ್ತ ಕಾರ್ಯಾಗಾರ ಇದರಲ್ಲಿ ಭಾಗವಹಿಸಿ ಗಣಕಯಂತ್ರದ ಜ್ಞಾನ ಹೆಚ್ಚಿಸಿಕೊಳ್ಳಲು ತಿಳಿಸಿದರು. ಈ ಕಾರ್ಯಾಗಾರವು ಟೆಕ್ನಿಕಲ್ ಎಜುಕೇಷನ್ ಕ್ವಾಲಿಟಿ ಇಂಪ್ರೂಮೆಂಟ್ ಪ್ರೋಗ್ರಾಮ್-2 ಪ್ರಸ್ತುತಪಡಿಸಿದ್ದು,  ಬೆಂಗಳೂರು, ಧಾರವಾಡ, ವಿಜಾಪುರ, ಸೊಲ್ಲಾಪುರ ಇನ್ನಿತರ ಭಾಗದಿಂದ ಬಂದಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಎಸ್.ಎಸ್.ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು. ಡಾ.ಮಹಾದೇವಪ್ಪ ಗಾದಗೆ, ಅಶೋಕ ಪಾಟೀಲ ಮತ್ತಿತರರು ಇದ್ದರು.ಸುಪ್ರಿಯಾ, ಗಂಗೋತ್ರಿ ಪ್ರಾರ್ಥಿಸಿದರು. ಪ್ರೊ. ಜ್ಯೋತಿ ಪಾಟೀಲ ಸ್ವಾಗತಿಸಿದರು. ಡಾ.ವಿಶ್ವನಾಥ ಬೂರಕಪಳ್ಳಿ ಅತಿಥಿ ಪರಿಚಯಿಸಿದರು. ಸ್ಮಿತಾ ಪಾಟೀಲ ನಿರೂಪಿಸಿದರು. ಉದಯ ಬಣಗಾರ ವಂದಿಸಿದರು.ಬೇಸಿಗೆ ತರಬೇತಿ ಶಿಬಿರ

ಗುಲ್ಬರ್ಗ: ಗುಲ್ಬರ್ಗದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯು ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಇದೇ 10ರಿಂದ 30ರವರೆಗೆ ಕ್ರಿಕೆಟ್ ಹಾಗೂ ಟೆನ್ನಿಸ್ ಕ್ರೀಡೆಗಳನ್ನು 10 ವರ್ಷದಿಂದ 16 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಆಸಕ್ತಿಯುಳ್ಳ ಕ್ರೀಡಾಪಟುಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಲು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಕೆ. ವಿಶ್ವನಾಥ ಕ್ರಿಕೆಟ್ ಹಾಗೂ ಟೆನ್ನಿಸ್ ತರಬೇತುಗಾರರನ್ನು ಮತ್ತು ದೂರವಾಣಿ ಸಂಖ್ಯೆ 9880212769 ಅಥವಾ 08472-278637ನ್ನು ಸಂಪರ್ಕಿಸಬಹುದಾಗಿದೆ.

ಮೊಬೈಲ್‌ನಿಂದ ಮತದಾರರ ಪಟ್ಟಿ ಪರಿಶೀಲನೆ

ಗುಲ್ಬರ್ಗ: ಮತದಾರರು ತಮ್ಮ  ಮೊಬೈಲ್‌ನಿಂದಲೇ ಮತದಾರರ ಯಾದಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಬಹುದಾಗಿದೆ. ಮೊಬೈಲ್‌ನಲ್ಲಿ ಛಿಚ್ಚ ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ತಮ್ಮ ಗುರುತಿನ ಚೀಟಿಯ ಸಂಖ್ಯೆಯನ್ನು ಟೈಪ್‌ಮಾಡಿ ಬಳಿಕ ಆಯೋಗದ ದೂರವಾಣಿ ಸಂಖ್ಯೆ 9243355223ಗೆ ಎಸ್.ಎಂ.ಎಸ್. ಮಾಡಿದರೆ 10-15 ಸೆಕೆಂಡುಗಳಲ್ಲಿ ಉತ್ತರ ಲಭ್ಯವಾಗಲಿದೆ

ಪ್ರತಿಕ್ರಿಯಿಸಿ (+)