ತಾಂತ್ರಿಕ ತೊಂದರೆ: ವಿಮಾನ ತುರ್ತು ಭೂ ಸ್ಪರ್ಶ

7

ತಾಂತ್ರಿಕ ತೊಂದರೆ: ವಿಮಾನ ತುರ್ತು ಭೂ ಸ್ಪರ್ಶ

Published:
Updated:

ಭೋಪಾಲ್, (ಪಿಟಿಐ): ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾಗೆ ಸೇರಿದ ವಿಮಾನದಲ್ಲಿ ತಾಂತ್ರಿಕ ತೊಂದರೆ ಉಂಟಾದ್ದರಿಂದ ಅದು ಇಲ್ಲಿನ ರಾಜ ಭೋಜ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಎಐ-634 ಸಂಖ್ಯೆ ಈ ವಿಮಾನದಲ್ಲಿ 70ಜನ ಪ್ರಯಾಣಿಕರಿದ್ದರು. ಹಾರಾಟ ಆರಂಭಿಸಿದ ನಂತರ 15 ನಿಮಿಷಗಳ ಬಳಿಕ ಈ ತೊಂದರೆ ಉಂಟಾಯಿತು.ಹಠಾತ್ ಎದುರಾದ ಎಂಜಿನ್ ದೋಷ ಸರಿಪಡಿಸಲು ಎಂಜಿನಿಯರ್‌ಗಳು ವಿಫಲವಾದ್ದರಿಂದ ಈ ವಿಮಾನದ ಸಂಚಾರವನ್ನೇ ರದ್ದುಪಡಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಈ ವಿಮಾನದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಬೇರೆ ವಿಮಾನದ ಮೂಲಕ ಇಂದೋರ್ ಮತ್ತು ಮುಂಬೈಗೆ ಕಳುಹಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry