ಭಾನುವಾರ, ಮೇ 16, 2021
26 °C

ತಾಂತ್ರಿಕ ದೋಷ: ಆರ್‌ಟಿಪಿಎಸ್ 7ನೇ ಘಟಕ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು:  ಆರ್‌ಟಿಪಿಎಸ್‌ನ 7 ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಈ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಭಾನುವಾರ ಸ್ಥಗಿತಗೊಂಡಿದೆ.ಬಾಯ್ಲರ್‌ನಿಂದ ಟರ್ಬೈನ್‌ಗೆ ಆವಿ ಪೂರೈಸುವ ಕೊಳವೆಯಲ್ಲಿ ರಂಧ್ರ ಕಂಡುಬಂದಿರುವುದು ತಾಂತ್ರಿಕ ಸಮಸ್ಯೆ ಕಾರಣವಾಗಿದೆ. ದುರಸ್ತಿ ಕಾರ್ಯ ಮುಂದುವರಿದಿದೆ. ಸದ್ಯ 7 ಘಟಕಗಳಿಂದ 1400 ಮೆಗಾವಾಟ್ ವಿದ್ಯುತ್ ಉತ್ಪಾದನೆ  ನಡೆಯುತ್ತಿದೆ ಎಂದು ಆರ್‌ಟಿಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.ಆರ್‌ಟಿಪಿಎಸ್ ಸ್ಥಾವರಕ್ಕೆ ಎದುರಾಗಿರುವ ನೀರಿನ ಸಮಸ್ಥೆಯನ್ನು ನಿವಾರಿಸಲು ಪ್ರಯತ್ನ ನಡೆದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.