ಗುರುವಾರ , ನವೆಂಬರ್ 21, 2019
21 °C

ತಾಂತ್ರಿಕ-ಸಾಂಸ್ಕೃತಿಕ ಉತ್ಸವದಲ್ಲಿ...

Published:
Updated:
ತಾಂತ್ರಿಕ-ಸಾಂಸ್ಕೃತಿಕ ಉತ್ಸವದಲ್ಲಿ...

ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ `ಅನಾದ್ಯಂತ' ಫ್ಯಾಷನ್ ಶೋ, ಬೀದಿನಾಟಕ ಮತ್ತು ಸಂಗೀತ, ಕಲಾ ಪ್ರದರ್ಶನ, ಬ್ಯಾಂಡ್‌ಗಳ ಸಂಗೀತ ಸ್ಪರ್ಧೆ, ಭಾರತೀಯ ಮತ್ತು ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಗಳಿಂದಾಗಿ ರಂಗೇರಿತ್ತು. ದೇಶದಾದ್ಯಂತದ 84 ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಉತ್ಸವದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಫ್ಯಾಷನ್ ಶೋದಲ್ಲಿ ಗ್ವಾಲಿಯರ್‌ನ ಐಐಎಫ್‌ಟಿ ತಂಡ ಗೆದ್ದರೆ ನಗರದ ಕ್ರೈಸ್ಟ್ ಯೂನಿವರ್ಸಿಟಿಯ ತಂಡ ಬೀದಿನಾಟಕದಲ್ಲಿ ವಿಜಯಿಯಾಯಿತು. `ಗಲೀಜ್‌ಗುರು' ತಂಡದಿಂದ ಸಂಗೀತ ಸಂಜೆ, ಡಿಜೆ ಪಾಣಿ ಅವರಿಂದ ಡಿಜೆ ನೈಟ್ ನಡೆದವು.

ಪ್ರತಿಕ್ರಿಯಿಸಿ (+)