ತಾಂಬೆ ಗುಣಗಾನ ಮಾಡಿದ ದ್ರಾವಿಡ್

7

ತಾಂಬೆ ಗುಣಗಾನ ಮಾಡಿದ ದ್ರಾವಿಡ್

Published:
Updated:

ಜೈಪುರ (ಪಿಟಿಐ):  ‘ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಗಳಿಸಲು ಪರದಾಡುತ್ತಿದ್ದ ಸಂದರ್ಭವದು. ಮೊದಮೊದಲು ಪ್ರವೀಣ್‌ ತಾಂಬೆಗೆ ಯಾರೂ ಅವಕಾಶವನ್ನೇ ನೀಡುತ್ತಿರಲಿಲ್ಲ. ಆದರೆ, ಕಠಿಣ ಅಭ್ಯಾಸ ನಡೆಸಿ ಕ್ರಿಕೆಟ್‌ ಅಂಗಳದಲ್ಲಿ ಕಾಣಿಸಿಕೊಂಡ ಅವರ ಕಥೆ ಅದ್ಭುತವಾದದ್ದು’ ಎಂದು ರಾಜಸ್ತಾನ ರಾಯಲ್ಸ್‌ ತಂಡದ ನಾಯಕ ರಾಹುಲ್‌ ದ್ರಾವಿಡ್‌ ಅವರು  41 ವರ್ಷದ ತಾಂಬೆ ಗುಣಗಾನ ಮಾಡಿದರು.ಸವಾಯಿ ಮಾನಸಿಂಗ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್ಸ್‌ ತಂಡ ಹೈವೆಲ್ಡ್‌ ಲಯನ್ಸ್‌ ಎದುರು 30 ರನ್‌ಗಳ ಗೆಲುವು ಪಡೆಯಿತು.ರಾಯಲ್ಸ್‌ ನೀಡಿದ 184 ರನ್‌ಗಳ ಗುರಿಯನ್ನು ಮುಟ್ಟಲಾಗದೇ ಲಯನ್ಸ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 153 ರನ್‌ಗಳನ್ನಷ್ಟೇ ಕಲೆ ಹಾಕಿತು. ಮುಂಬೈನ ಹಿರಿಯ ಆಟಗಾರ ತಾಂಬೆ (3–0–15–4) ಅತ್ಯುತ್ತಮ ಬೌಲಿಂಗ್‌ ಮಾಡಿ ರಾಯಲ್ಸ್‌ ತಂಡಕ್ಕೆ ಈ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ತಂದುಕೊಟ್ಟರು. ಈ ಪಂದ್ಯದ ಬಳಿಕ ದ್ರಾವಿಡ್‌ ಮಾತನಾಡಿದರು.‘ಕಂಗಾ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ತಾಂಬೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವಕಾಶ ಪಡೆದರು. ಮೊದಲ ಪಂದ್ಯದಲ್ಲಿ 18 ವರ್ಷದ ಸಂಜು ಸ್ಯಾಮ್ಸನ್‌ ಉತ್ತಮ ಪ್ರದರ್ಶನ ತೋರಿದರೆ, ಎರಡನೇ ಪಂದ್ಯದಲ್ಲಿ  ತಾಂಬೆ ಮಿಂಚಿನ ಆಟವಾಡಿದರು. ಯುವ ಹಾಗೂ ಹಿರಿಯ  ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಖುಷಿ ನೀಡಿದೆ’ ಎಂದು ದ್ರಾವಿಡ್‌ ಹೇಳಿದರು.ಸಂಕ್ಷಿಪ್ತ ಸ್ಕೋರು: ರಾಜಸ್ತಾನ ರಾಯಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183.  ಹೈವೆಲ್ಡ್‌ ಲಯನ್ಸ್‌ 20  ಓವರ್‌ಗಳಲ್ಲಿ 9 ವಿಕೆಟ್‌ಗೆ 153. (ಹರ್ಡಸ್‌ ವಿಲ್‌ಜಿಯೊನ್‌ 24, ಅಲ್ವಿರೊ ಪೀಟರ್ಸನ್‌ 40; ವಿಕ್ರಮ್‌ಜೀತ್‌ ಮಲೀಕ್‌ 26ಕ್ಕೆ2, ಜೇಮ್ಸ್‌ ಫಾಕನರ್‌ 22ಕ್ಕೆ2, ಪ್ರವೀಣ್ ತಾಂಬೆ 15ಕ್ಕೆ4). ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 30 ರನ್‌ ಗೆಲುವು. ಪಂದ್ಯ ಶ್ರೇಷ್ಠ: ಪ್ರವೀಣ್‌ ತಾಂಬೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry