`ತಾತ್ವಿಕ ನೆಲೆಗಟ್ಟು, ಬಸವ ನಿಷ್ಠೆ ಕೊರತೆ'

7

`ತಾತ್ವಿಕ ನೆಲೆಗಟ್ಟು, ಬಸವ ನಿಷ್ಠೆ ಕೊರತೆ'

Published:
Updated:

ಬೀದರ್: ಲಿಂಗಾಯತರಲ್ಲಿ ತಾತ್ವಿಕ ನೆಲೆಗಟ್ಟು ಇದೆ. ಆದರೆ, ಬಸವ ನಿಷ್ಠೆ ಕಡಿಮೆಯಾಗುತ್ತಿದೆ. ಹೀಗಾಗಿ ಎಲ್ಲರೂ ಅನುಭಾವ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಸೋಮವಾರ ಅಭಿಪ್ರಾಯಪಟ್ಟರು.ರಂಗಮಂದಿರದಲ್ಲಿ ನಡೆದ ಎರಡು ದಿನದ `ಲಿಂಗಾಯತ ಧರ್ಮದ ಜಾಗತೀಕರಣ' ವಿಷಯ ವಿಚಾರ ಸಂಕಿರಣದ ಸಮಾರೋಪ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಭಕ್ತಿ ನಮ್ಮ ಆಸ್ತಿ. ಬಸವಣ್ಣನವರನ್ನು ಧಾರ್ಮಿಕ ಚೌಕಟ್ಟಿನಲ್ಲಿ ಕಟ್ಟು ಹಾಕಬಾರದು ಎಂದು ಸಲಹೆ ಮಾಡಿದರು. `ಇದೊಂದು ವೈಚಾರಿಕ ಧರ್ಮ. ಬಸವ ಸಮಾಜ ಒಗ್ಗೂಡಿಸುವ ತತ್ವ.ಇದು ಅಖಂಡ, ಚೈತನ್ಯದ ಧರ್ಮ. ಅಧ್ಯಾತ್ಮಿಕ ಕ್ರಾಂತಿ ಕಾಯಕ ಶರಣರನ್ನು ಎತ್ತಿಕೊಂಡ ಧರ್ಮ ಎಂದು ವ್ಯಾಖ್ಯಾನಿಸಿದರು. `ಲಿಂಗಾಯತರಲ್ಲಿ ಏಕರೂಪದ ಸಂವಿಧಾನ ಇರದ ಕಾರಣ ನಾವಿಂದು ಒಟ್ಟಾಗಲು ವಿಫಲರಾಗಿದ್ದೇವೆ. ಶರಣರ ತತ್ವ ಬಿಟ್ಟರೆ ನಮಗೆ ಗತಿ ಇಲ್ಲ ಎಂಬುದನ್ನು ಗಮನಿಸಬೇಕು ಎಂದು ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು, ಪರಸ್ಪರ ಪ್ರೀತಿ, ಸೌಹಾರ್ಯತೆಯಿಂದ ಅರಿವು ಮೊಳಗಲು ಸಾಧ್ಯ. ಆಕ್ರಮಣಕಾರಿ ಮಾತು ಸಲ್ಲದು. ಸತ್ಯ ಕಹಿ. ಅದನ್ನು ಆಚರಣೆಗೆ ತರುಲು ಬಹಳ ದಿವಸ ಬೇಕು. ಬಸವಣ್ಣನೇ ಲಿಂಗಾಯತ ಧರ್ಮದ ಸಂಸ್ಥಾಪಕ. ಪಂಚಾಚಾರ್ಯ, ಷಟಸ್ಥಲ, ಅಷ್ಟಾವರಣ ಒಪ್ಪುವ ಎಲ್ಲರೂ ಲಿಂಗಾಯತರು'ಎಂದರು.ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಅಂದ್ರಪ್ರದೇಶದ ವಿಜಯಕುಮಾರ ಪಸಾರಂ, ತಮಿಳುನಾಡಿನ ಶಿವಕುಮಾರ, ಟಿ.ಎನ್ ಮಾದಪ್ಪ, ಪ್ರಾಧ್ಯಾಪಕ ಲಿಂಗಣ್ಣ ಕಲ್ಬುರ್ಗಿ ಮಾತನಾಡಿದರು.ವಿರುಪಾಕ್ಷ ಗಾದಗಿ ಸ್ವಾಗತಿಸಿದರು. ಡಾ. ರಘುಶಂಖ ಭಾತಂಬ್ರಾ ನಿರೂಪಿಸಿದರು ಚಂದ್ರಪ್ಪ ಜಾಬಾ ವಂದಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ಬಾಬು ವಾಲಿ, ಸಂಜಯ ಮಾಕಾಲ, ಲಾತೂರಿನ ವಿಜಯ ಸೇಠ್ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry