ಸೋಮವಾರ, ಏಪ್ರಿಲ್ 12, 2021
24 °C

ತಾನಿಷ್ಕ್‌ನಿಂದ ಗಂಗಾ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾನಿಷ್ಕ್‌ನಿಂದ ಗಂಗಾ ಸಂಗ್ರಹ

ಚಿನ್ನಾಭರಣ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ತಾನಿಷ್ಕ್ ವಿಶೇಷ ಕಸೂತಿ ಹೊಂದಿರುವ `ಗಂಗಾ~ ಆಭರಣ ಸಂಗ್ರಹವನ್ನು ಪರಿಚಯಿಸಿದೆ. 18 ಕ್ಯಾರೆಟ್ ಚಿನ್ನದಿಂದ ಕೆತ್ತಿರುವ ಈ ಸಂಗ್ರಹ ವಜ್ರ ಮತ್ತು ಪೊಲ್ಕಿಗಳಿಂದ ಲೇಪಿತಗೊಂಡಿದೆ. ಕಿವಿಯೋಲೆ, ಪದಕ, ಬಳೆ ಮತ್ತು ನೆಕ್ಲೇಸ್ ಸೇರಿದಂತೆ ಅನೇಕ ಆಭರಣವನ್ನು ಸಂಗ್ರಹ ಒಳಗೊಂಡಿದೆ.

ಸಂಗ್ರಹದ ಕುರಿತು ಮಾತನಾಡಿದ ತಾನಿಷ್ಕ್ ರಿಟೇಲ್ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ಸಂದೀಪ್ ಕುಲ್ಲಹಳ್ಳಿ, “ತಾನಿಷ್ಕ್, ಗ್ರಾಹಕರ ಆದ್ಯತೆ ಆಧರಿಸಿ ಹೊಸ ಸಂಗ್ರಹ ಪರಿಚಯಿಸುತ್ತಿದೆ. `ಗಂಗಾ~ ಸಂಗ್ರಹವೂ ದೇಶದ ಪವಿತ್ರ ನದಿ ಗಂಗೆಯ ಶುದ್ಧತೆ, ಭಕ್ತಿಯಿಂದ ಪ್ರೇರಿತಗೊಂಡಿದೆ. ಆಭರಣ ಕ್ಷೇತ್ರದಲ್ಲಿ ಇದು ಹೊಸತನವೊಂದನ್ನು ಗ್ರಾಹಕರಿಗೆ ನೀಡಲಿದೆ” ಎಂದರು. ಈ ಸಂಗ್ರಹದಲ್ಲಿ ಆಭರಣಗಳ ಆರಂಭಿಕ ಬೆಲೆ 35,000ರೂ.ಕಾರು ಗೆದ್ದವರು


ಐಡಿಯಾ ಸೆಲ್ಯುಲರ್ ಆಯೋಜಿಸಿದ್ದ `ಗೆಲ್ಲಿರಿ ನಾನ್ ಸ್ಟಾಪ್ ಚಾಲೆಂಜ್~ ಸ್ಪರ್ಧೆಯಲ್ಲಿ ಬಸವನಗೌಡ ವಿಜೇತರಾಗಿದ್ದು, ಈ ಅದೃಷ್ಟಶಾಲಿ ಈಗ ಹ್ಯುಂಡೈ ಕಾರಿನ ಒಡೆಯರಾಗಿದ್ದಾರೆ.`ಕನಸು ನಿಜವಾಗುವಂತೆ ಮಾಡಿದ್ದಕ್ಕೆ ನಾನು ಐಡಿಯಾಗೆ ಧನ್ಯವಾದ ಅರ್ಪಿಸುತ್ತೇನೆ. ಹ್ಯುಂಡಾಯ್ ಕಾರ್ ಸರಿಯಾಗಿ ಹಬ್ಬದ ಸಾಲಿಗೆ ಬಂದಿದೆ. ನಾನು ಮತ್ತು ನನ್ನ ಕುಟುಂಬ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಿದ್ದೇವೆ~ ಎಂದು ಹರ್ಷ ವ್ಯಕ್ತಪಡಿಸಿದರು ಪಾಟೀಲ್.ಅಂದಹಾಗೆ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಐಡಿಯಾ ಪ್ರೀಪೇಡ್ ಗ್ರಾಹಕರು ಟೋಲ್ ಫ್ರೀ ನಂಬರ್ 5575522ಗೆ ಕರೆ ಮಾಡಿ ರಿಜಿಸ್ಟರ್ ಮಾಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರತಿದಿನ ಟೋಲ್ ಫ್ರೀ ನಂಬರಿಗೆ ಕರೆಮಾಡಿ ಮೂರು ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.