ತಾನಿಷ್ಕ್ ಮಳಿಗೆಯ ಆಕರ್ಷಕ ಆಫರ್

7

ತಾನಿಷ್ಕ್ ಮಳಿಗೆಯ ಆಕರ್ಷಕ ಆಫರ್

Published:
Updated:
ತಾನಿಷ್ಕ್ ಮಳಿಗೆಯ ಆಕರ್ಷಕ ಆಫರ್

ಬ್ರಾಂಡೆಡ್ ಆಭರಣ ಉದ್ಯಮದಲ್ಲಿ ಹೆಸರಾದ ಟಾಟಾ ಸಮೂಹದ ತಾನಿಷ್ಕ್ ಜಯನಗರದ ಮಳಿಗೆ ಹೊಸ ರೂಪ ಪಡೆದುಕೊಂಡಿದೆ. ಹಿಂದಿನ ಮಳಿಗೆಗಳಿಗಿಂತ ದುಪ್ಪಟ್ಟು ವಿಶಾಲವಾಗಿದೆ. ಚಿನ್ನ, ವಜ್ರ ಮತ್ತು ಹರಳುಗಳ ವೈವಿಧ್ಯಮಯ ಡಿಸೈನ್‌ನ ಆಭರಣಗಳು ಇಲ್ಲಿ ಲಭ್ಯವಾಗಲಿವೆ.ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಯೋಜನೆ ಘೋಷಿಸಿದೆ. 15ಗ್ರಾಂ ಮೇಲ್ಪಟ್ಟು ಚಿನ್ನ ಅಥವಾ 15,000 ರೂಗಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಸಿದರೆ ಅರ್ಧ ಗ್ರಾಂ ಚಿನ್ನ ಉಚಿತ. ಈ ಕೊಡುಗೆ ಸೆ.11ರ ವರೆಗೆ ಜಯನಗರ ಮಳಿಗೆಯಲ್ಲಿ ಮಾತ್ರ ಲಭ್ಯ.ನವೀಕೃತ ಮಳಿಗೆಗೆ ಚಾಲನೆ ನೀಡಿ ತಾನಿಷ್ಕ್ ಸಿಒಒ ಸಿ.ಕೆ ವೆಂಕಟರಮಣನ್, ಈ ಮಳಿಗೆ ವಿಶ್ವದರ್ಜೆಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಖರೀದಿ ಅನುಭವ ಕೂಡ ಅನನ್ಯವಾಗಿ ಇರುತ್ತದೆ. ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ನಿಟ್ಟಿನಲ್ಲಿ ಮಳಿಗೆಗಳನ್ನು ವಿಸ್ತರಿಸುತ್ತಿದೆ~ ಎಂದರು. ಇದೇ ಸಂದರ್ಭದಲ್ಲಿ ತಾನಿಷ್ಕ್‌ನ ಅತ್ಯಾಧುನಿಕ ತಾಜ್ ಸಂಗ್ರಹದ ಪ್ರದರ್ಶನ ನಡೆಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry