ತಾ.ಪಂ.ಗೆ ಕೂಲಿಕಾರ್ಮಿಕರ ಮುತ್ತಿಗೆ

7

ತಾ.ಪಂ.ಗೆ ಕೂಲಿಕಾರ್ಮಿಕರ ಮುತ್ತಿಗೆ

Published:
Updated:

ಗುಬ್ಬಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈಚೆಗೆ ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಕೂಲಿ ಕಾರ್ಮಿಕರಿಗೆ ವಿತರಿಸದೆ ಅಧಿಕಾರಿಗಳು ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿ ಕೂಲಿ ಕಾರ್ಮಿಕರು ಸೋಮವಾರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಒಂದು ವರ್ಷದಿಂದ ಕಚೇರಿಗೆ ಅಲೆದು ಬೇಸತ್ತಿದ್ದು,ಈಗ ಸಲ್ಲದ ನೆಪಹೊಡ್ಡಿ ಅಧಿಕಾರಿಗಳು ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡಿತ್ತಿದ್ದಾರೆ ಎಂದು ಆರೋಪಿಸಿದರು.ಜಲಾನಯನ, ಲೋಕೋಪಯೋಗಿ,ರೇಷ್ಮೆ, ಕೃಷಿ ಇನ್ನಿತರ ಇಲಾಖೆಯನ್ನು ಹೊರತು ಪಡಿಸಿ ತೋಟಗಾರಿಕೆ ಇಲಾಖೆ ಕಾಮಗಾರಿಗೆ ಮಾತ್ರ ಹಣ ಬಿಡುಗಡೆಗೆ ಮುಂದಾಗಿರುವುದು ತಾರತಮ್ಯ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಹಿಡಿತದಲ್ಲಿ ಇರಿಸಿಕೊಳ್ಳದ ಕಾರ್ಯನಿರ್ವಹಣಾಧಿಕಾರಿ ತಮ್ಮ ಕರ್ತವ್ಯದಲ್ಲಿ ಸೋತಿದ್ದಾರೆ. ಮುಂದಿನ 8 ದಿನದಲ್ಲಿ ಕೂಲಿಕಾರ್ಮಿಕರ ಹಣ ಬಿಡುಗಡೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್.ವಿಜಯ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಎಸ್.ನಂಜೇಗೌಡ, ಬಿ.ಎಸ್.ಪ್ರಸಾದ್, ಲೋಕೇಶ್, ಸಿ.ಜಿ.ಗಂಗಾಧರಯ್ಯ, ಯತೀಶ್‌ಕುಮಾರ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry