ಶುಕ್ರವಾರ, ಜೂನ್ 18, 2021
25 °C

ತಾ.ಪಂ.ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ಹೇಳಿಕೆ:ಅನರ್ಹ ಫಲಾನುಭವಿಗಳ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ತಾಲ್ಲೂಕಿನಲ್ಲಿರುವ 31 ಸಾವಿರ ಮಾಸಾಸನ ಫಲಾನುಭವಿ ಗಳಲ್ಲಿ ಅನರ್ಹ ಏಳು ಸಾವಿರ ಫಲಾನುಭವಿಗಳನ್ನು ಕಡಿತಗೊಳಿಸ ಲಾಗಿದೆ ಎಂದು ತಹಶೀಲ್ದಾರ್ ಶಿವಲಿಂಗು ತಿಳಿಸಿದರು.ನಗರದ ತಾಲ್ಲೂಕು ಪಮಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಹ ಫಲಾನುಭವಿಗಳು ಸಾಮಾಜಿಕ ಭದ್ರತೆಯ ವೇತನಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.ಅನರ್ಹರ ಪಟ್ಟಿಯಲ್ಲಿ ಅರ್ಹರ ಹೆಸರು ಕೈಬಿಟ್ಟು ಹೋಗಿದ್ದರೆ, ಅಂತಹ ಫಲಾನುಭವಿಗಳ ಬಗ್ಗೆ ಪರಿಶೀಲಿಸಿ, ಸಹಾಯಕ ಆಯುಕ್ತರ ನೇತೃತ್ವದ ಸಮಿತಿ ಎದುರು ತಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಂಜೂರಿಯಾಗಿ ಕಳುಹಿಸಿಕೊಡ ಲಾಗುವುದು ಎಂದರು.ಇದಕ್ಕೂ ಮುನ್ನ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸಾಕಷ್ಟು ಅರ್ಹ ಮಾಸಾಸನ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಂತಹ ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆಯ ವೇತನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಎಂದು ತಾ.ಪಂ. ಸದಸ್ಯರು ಒತ್ತಾಯಿಸಿದರು.ಸಾಮಾಜಿಕ ಭದ್ರತೆಯ ವೇತನ ಫಲಾನುಭವಿಗಳಾದ ಅಂಗವಿಕಲರ ಸಮೀಕ್ಷೆ ಸಮರ್ಪಕವಾಗಿಲ್ಲ. ಅರ್ಹ ಅಂಗವಿಕಲರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದ ಸದಸ್ಯ ತಿಪ್ಪಣ್ಣ ಆಲದಕಟ್ಟಿ ಬೇರೆ ಕೆಲಸಗಳನ್ನು ಬದಿಗಿಟ್ಟು ಈ ತರಹದ ಸಮಸ್ಯೆಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.ಸದಸ್ಯ ಶ್ರೀನಿಧಿ ದೇಶಪಾಂಡೆ ಸಹ ಆಲದಕಟ್ಟಿಯವರ ಮಾತಿಗೆ ಧನಿಗೂಡಿಸಿ, ಸಾಮಾಜಿಕ ಭದ್ರತೆ ವೇತನ ಫಲಾನುಭವಿಗಳ ಆಯ್ಕೆ ಸಮೀಕ್ಷೆ  ಸಮರ್ಪಕವಾಗಿಲ್ಲ. ಅರ್ಹ ರನ್ನು ಹೊರಗಿಟ್ಟು ಅನರ್ಹರಿಗೆ ಸೌಲಭ್ಯ ಕಲ್ಪಿಸುವ ರೀತಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಇಂತಹ ಉದಾ ಹರಣೆಗಳು ಸಾಕಷ್ಟಿವೆ ಎಂದು ಸಭೆಯ ಗಮನಕ್ಕೆ ತಂದರು. ಆಗ ತಹಶೀಲ್ದಾರ್ ಶಿವಲಿಂಗ್ ಅವರು, ಅರ್ನಹರನ್ನು ಕಡಿತಗೊಳಿ ಸಿದ್ದರ ಬಗ್ಗೆ ಸಭೆಗೆ ಮಾಹಿತಿ ನೀಡಿ, ಅರ್ಹರನ್ನು ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಅಧಿಕಾರಿಗಳು ಭಾಗ್ಯಲಕ್ಷ್ಮೀ ಯೋಜನೆಗೆ ಅರ್ಜಿ ಸ್ವೀಕರಿಸದೇ ಇರುವ ಬಗ್ಗೆ ಸದಸ್ಯ ಆಲದಕಟ್ಟಿ ಪ್ರಸ್ತಾಪಿಸಿದಾಗ, ಭಾಗಲಕ್ಷ್ಮೀ ಯೋಜನೆಯಡಿ ಸರ್ಕಾರ ನಿರ್ಧಿಷ್ಟ ಮಿತಿಗೆ ಸೀಮಿತಗೊಳಿಸಿದೆ. ಆದ್ದರಿಂದ ಈಗ ಹೊಸ ಅರ್ಜಿಗಳನ್ನು ಸ್ವೀಕ ರಿಸುತ್ತಿಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.ಸಭೆಗೆ ಅಧಿಕಾರಿಗಳು ಗೈರು ಇರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಮುಂಬರುವ ಸಭೆಗಳಿಗೆ ಗೈರು ಇರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ರಜೆಯಲ್ಲಿ ಬಿಸಿಯೂಟ: ಮುಂಬ ರುವ ಬೇಸಿಗೆ ರಜೆಯಲ್ಲಿ ಸಹ ಬಿಸಿಯೂಟ ಮುಂದುವರೆಸ ಲಾಗು ವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ ಸಭೆಗೆ ತಿಳಿಸಿದರು.ಶಾಲೆಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನ ರಜಾ ದಿನಗಳಲ್ಲಿಯೂ ಸಹ  ಬಿಸಿಯೂಟ ಮುಂದುವರೆಸಲು ಇಲಾಖೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಿಸಿಯೂಟ ಯೋಜನೆ ಶಾಲಾ ರಜೆ ದಿನಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದರು.ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಪರಮೇಶಪ್ಪ ಕುರವತ್ತಿಗೌಡ್ರ, ಉಪಾಧ್ಯಕ್ಷೆ ಗಂಗವ್ವ ಹಿತ್ತಲಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕಳಸೂರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಸವರಾಜ ಹಾಗೂ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳುಈ ಸಂದರ್ಭದಲ್ಲಿ  ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.