ಭಾನುವಾರ, ಆಗಸ್ಟ್ 18, 2019
23 °C

ತಾ.ಪಂ. ಅಧ್ಯಕ್ಷರ ಪದಚ್ಯುತಿ

Published:
Updated:

ಮುಳಬಾಗಲು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಿನ್ನಕ್ಕ ಹಾಗೂ ಉಪಾಧ್ಯಕ್ಷ ರಾಜೇಗೌಡ ಅವರನ್ನು ಸೋಮವಾರ 14 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿ ಗೊಳಿಸಿದರು.ಜೆಡಿಎಸ್‌ನ ಚಿನ್ನಕ್ಕ ಮತ್ತು ರಾಜೇಗೌಡ ವಿರುದ್ಧ  ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಎದುರು ಅವಿಶ್ವಾಸ ಮಂಡನೆ ಮಾಡಿದರು. ಒಟ್ಟು 19 ಸದಸ್ಯರ  ಪೈಕಿ 14 ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಮತ ಹಾಕಿದರು.

ಪದಚ್ಯುತಿಗೊಂಡ ಅಧ್ಯಕ್ಷರು ಸೇರಿದಂತೆ ಐವರು ಸಭೆಗೆ ಗೈರು ಹಾಜರಾಗಿದ್ದರು. ಸಭೆಯಲ್ಲಿ ಸದಸ್ಯರಾದ ತ್ರಿವೇಣಮ್ಮ, ಅರ್ಚನ, ವಿಜಯಲಕ್ಷ್ಮೀ, ನಾಗರತ್ನಮ್ಮ, ರಾಜಪ್ಪ, ಬೈರಪ್ಪ, ಶ್ರೀರಾಮಪ್ಪ, ವೆಂಕಟ ರಾಮಪ್ಪ, ಲಕ್ಷ್ಮೀದೇವಮ್ಮ,ಸುಬ್ಬಮ್ಮ, ಸರೋಜಾ, ಕಾಂತಮ್ಮ, ಪಿ.ವಿ.ಶಿವರಾಮರೆಡ್ಡಿ ಭಾಗವಹಿಸಿದ್ದರು. 

ಅಧ್ಯಕ್ಷೆ  ಚಿನ್ನಕ್ಕ, ಉಪಾಧ್ಯಕ್ಷ ರಾಜೇಗೌಡ, ಸದಸ್ಯರಾದ ಎನ್.ಸುಧಾ,ಕೆ.ಎಸ್.ಶ್ರೀನಿವಾಸ್,ಎಂ.ಎಸ್.ಶ್ರೀನಿವಾಸರೆಡ್ಡಿ ಸಭೆಗೆ ಗೈರು ಹಾಜರಾಗಿದ್ದರು.ಏಳು ಕಾಂಗ್ರೆಸ್, ಐದು ಜೆಡಿಎಸ್, ಇಬ್ಬರು ಪಕ್ಷೇತರ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಡಾ.ರಮಾನಂದ ಸಭೆ ನೇತೃತ್ವ ವಹಿಸಿದ್ದರು. ಪಿ.ವಿ.ಶಿವರಾಮರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮುಂಜಾಗ್ರತೆ  ಕ್ರಮವಾಗಿ ಬೀಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು

Post Comments (+)