ತಾಪಂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

7

ತಾಪಂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

Published:
Updated:

ಲಿಂಗಸುಗೂರ: ಸ್ಥಳೀಯ ತಾಲ್ಲೂಕು ಪಂಚಾಯಿತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಲಿತಾಬಾಯಿ ಶಿವನಗೌಡ ಪೊಲೀಸ್ ಪಾಟೀಲ(ಸಾಮಾನ್ಯ ಮಹಿಳೆ). ಉಪಾಧ್ಯಕ್ಷರಾಗಿ ಮಾನಪ್ಪ ಖೀರಪ್ಪ ಚವ್ಹಾಣ(ಪರಿಶಿಷ್ಟ ಜಾತಿ) ತಲಾ ಒಂದು ಮತಗಳ ಅಂತರದಿಂದ ವಿಜಯಿಶಾಲಿಗಳಾಗಿ ಆಯ್ಕೆಗೊಂಡಿದ್ದಾರೆ ಎಂದು ಸಹಾಯಕ ಆಯುಕ್ತ, ಚುನಾವಣಾಧಿಕಾರಿ ಟಿ. ಯೊಗೇಶ ಘೋಷಿಸಿದರು.ತಾಲ್ಲೂಕು ಪಂಚಾಯಿತಿ ಒಟ್ಟು 26 ಸದಸ್ಯರ ಪೈಕಿ ಹನುಮಂತಪ್ಪ ಮೋಚಿ ಗೈರು ಆಗಿದ್ದರು. 25 ಮತಗಳ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಲಲಿತಾಬಾಯಿ ಶಿವನಗೌಡ (13) ಪ್ರತಿಸ್ಪರ್ಧಿ ಲಲಿತಾ ಅಯ್ಯಪ್ಪ (12). ಉಪಾಧ್ಯಕ್ಷ ಸ್ಥಾನಕ್ಕೆ ಮಾನಪ್ಪ ಚವ್ಹಾಣ (13), ಪ್ರತಿಸ್ಪರ್ಧಿ ಗುಂಡಮ್ಮ ದುರುಗಪ್ಪ (12) ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಹಾಯಕ ಆಯುಕ್ತ ಟಿ. ಯೊಗೇಶ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೂಮಾಲೆ ಹಾಕಿ ಅಭಿನಂದಿಸಿ ಉತ್ತಮ ಆಡಳಿತ ನೀಡುವಂತೆ ಸಲಹೆ ಮಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.ಪೊಲೀಸ್ ಉಪ ವಿಭಾಗಾಧಿಕಾರಿ ಡಿ.ಎ. ಸೂರ್ಯವಂಶಿ ಮಾರ್ಗದರ್ಶನದಲ್ಲಿ, ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಆರ್. ಪಂಚಾಕ್ಷರಯ್ಯ, ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಸಿದ್ಧರಾಮಯ್ಯ, ಅಯ್ಯನಗೌಡ ಪಾಟೀಲ, ವೆಂಕಟೇಶ ಮುರ‌್ನಾಳ, ಪ್ರಕಾಶ ಮಾಳೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ  ಕಲ್ಪಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry