ಬುಧವಾರ, ಜೂನ್ 16, 2021
22 °C

ತಾ.ಪಂ. ನಿರ್ಲಕ್ಷ್ಯ: ಕಪ್ಪು ಪಟ್ಟಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ತಾಲ್ಲೂಕು ಪಂಚಾಯಿತಿಯ ಆಡಳಿತದಲ್ಲಿ ಹಲವಾರು ನ್ಯೂನತೆ ಗಳಿದ್ದು, ಅವುಗಳನ್ನು ಇದುವರೆಗೂ ಸರಿಪಡಿಸಿಕೊಂಡಿಲ್ಲ ಎಂದು ಆರೋಪಿಸಿ ಸದಸ್ಯರು ಸಾಮಾನ್ಯ ಸಭೆಯ ಸಭಾತ್ಯಾಗ ಮಾಡಿದ ಪ್ರಸಂಗ ಶುಕ್ರವಾರ ತಾ.ಪಂ ಸಭಾಂಗಣದಲ್ಲಿ ಜರುಗಿತು.ಕೂಡ್ಲಿಗಿ ತಾ.ಪಂ.ನಲ್ಲಿ ಸದಸ್ಯರು ಸಭಾತ್ಯಾಗ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಕೋರಂ ಇಲ್ಲದ ಕಾರಣ ಕಾರ್ಯ ನಿರ್ವಹಣಾ ಅಧಿಕಾರಿಗಳು ಸಭೆ ಮುಂದೂಡಿದರು.ಶುಕ್ರವಾರ ತಾ.ಪಂ ಸಭಾಂಗಣದಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ, ಕೆ. ಅಯ್ಯನಹಳ್ಳಿ ಕ್ಷೇತ್ರದ ಎ.ಎಂ. ಗುರುಪ್ರಸಾದ ಸೇರಿದಂತೆ 11 ಜನ ಸದಸ್ಯರು ಇಒ ಅವರಿಗೆ ಪ್ರಶ್ನೆಗಳ ಮಳೆಗರೆದರು.ಕೆ.ಅಯ್ಯನಹಳ್ಳಿ ಗ್ರಾ.ಪಂ 2010- 11ನೇ ಸಾಲಿನ ಬಸವ ಯೋಜನೆಯಡಿ 418 ಮತ್ತು ಇಂದಿರಾ ಆವಾಸ್ ಯೋಜನೆಯಡಿ 63 ಮನೆಗಳನ್ನು ಕಾನೂನುಬಾಹಿರವಾಗಿ ಫಲಾನುಭವಿ ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.ಸ್ಥಾಯಿ ಸಮಿತಿ ರಚನೆಯನ್ನು ಲಾಟರಿ ಮೂಲಕ ಮಾಡಬೇಕು, ತಾ.ಪಂ ಅನುದಾನದಲ್ಲಿ 23 ಕ್ಷೇತ್ರಗಳಿಗೆ ಸಮನಾಗಿ ಹಂಚಿರುವುದಿಲ್ಲ, ಮಹಿಳೆಯರಿಗೆ ಶೌಚಾಲಯವಿಲ್ಲ, ಈ ಮೊದಲು ಇದೇ ರೀತಿಯಲ್ಲಿ ಡಿಸೆಂಬರ್ 21ರಂದು ಸಭಾತ್ಯಾಗ ಮಾಡಿದಾಗ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದರೂ ಸರಿಯಾದ ಮಾಹಿತಿ ಒದಗಿಸಿರಲಿಲ್ಲ ಎಂಬುದು ಸದಸ್ಯರ ದೂರಾಗಿದೆ. ಪ್ರತಿಭಟಿಸಿದ ಸದಸ್ಯರು ಬಾಯಿಗೆ ಕಪ್ಪುಬಟ್ಟೆಯನ್ನು ಕಟ್ಟಿಕೊಂಡಿದ್ದರು.

ಸಭೆಯ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಕಾಂತರಾಜ್ ವಹಿಸಿದ್ದರು. ಉಪಾಧ್ಯಕ್ಷ ಬೆಣ್ಣೆ ಕೊಟ್ರೇಶ್, ತಾ.ಪಂ. ಇಒ ಸಣ್ಣವೀರಣ್ಣ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.