ತಾಪಮಾನ: ಅಪಾಯದ ಎಚ್ಚರಿಕೆ

7

ತಾಪಮಾನ: ಅಪಾಯದ ಎಚ್ಚರಿಕೆ

Published:
Updated:

ಸ್ಟಾಕ್‌ಹೋಮ್ (ಎಎಫ್‌ಪಿ): ಜಾಗತಿಕ ತಾಪಮಾನ ಬಗ್ಗೆ ಅಧ್ಯಯನ ನಡೆಸಲು ನೇಮಿಸಲಾಗಿದ್ದ ಅಂತರ ಸರ್ಕಾರ ಸಮಿ­ತಿಯು (ಐಪಿಸಿಸಿ) ತನ್ನ ವರದಿಯನ್ನು ಶುಕ್ರವಾರ ಸ್ವೀಡನ್‌ನಲ್ಲಿ ಮಂಡಿಸಲಿದೆ. ತಾಪಮಾನ ಹೆಚ್ಚಳ­ದಿಂದಾಗಿ ಸಮುದ್ರ ಮಟ್ಟದಲ್ಲಿ ತೀವ್ರ ಏರಿಕೆಯಾಗಲಿದೆ ಎಂಬ ಎಚ್ಚರಿಕೆಯ ಸಂದೇಶ ವರದಿಯಲ್ಲಿದೆ.ತಾಪಮಾನ ಬದಲಾವಣೆಯಿಂದಾಗಿ ಆರು ವರ್ಷಗಳ ಹಿಂದೆ ಊಹಿಸಿದ್ದ­ಕ್ಕಿಂ­ತಲೂ ಹೆಚ್ಚಿನ ಪ್ರಮಾಣದಲ್ಲಿ ಸಮು­ದ್ರದ ನೀರಿನ ಮಟ್ಟ ಏರಲಿದೆ ಎಂದು ವರದಿ ಸಿದ್ಧಪಡಿಸಿರುವ ವಿಶ್ವಸಂಸ್ಥೆಯ ತಜ್ಞರು ಹೇಳಿದ್ದಾರೆ.2100ರ ವೇಳೆಗೆ ಸಮುದ್ರದ ನೀರಿನ ಮಟ್ಟ 26ರಿಂದ 81 ಸೆಂ.ಮೀಗಳಷ್ಟು ಹೆಚ್ಚಲಿದೆ. ಇದರಿಂದಾಗಿ ಲಕ್ಷಾಂತರ ಜೀವಿ­ಗಳ ಪ್ರಾಣಕ್ಕೆ ಕುತ್ತು ಬರಲಿದೆ ಎಂಬ ಅಂಶ ಸಿದ್ಧಪಡಿಸಿದ ಕರಡು ವರದಿ­ಯಲ್ಲಿದೆ.2100ರ ವೇಳೆಗೆ ಸಮುದ್ರದ ನೀರಿನ ಮಟ್ಟ 18ರಿಂದ 59 ಸೆಂ.ಮೀ. ವರೆಗೆ ಹೆಚ್ಚಳವಾಗಲಿದೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಹವಾಮಾನ ತಜ್ಞರ ತಂಡವೊಂದು 2007ರಲ್ಲಿ ಭವಿಷ್ಯ ನುಡಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry