ತಾಪಮಾನ ಏರಿಕೆ ಮಾನವ ಸೃಷ್ಟಿ

7
ವಿಶ್ವಸಂಸ್ಥೆ ಹವಾಮಾನ ಸಮಿತಿಯ ವೈಜ್ಞಾನಿಕ ತಂಡದ ವರದಿ

ತಾಪಮಾನ ಏರಿಕೆ ಮಾನವ ಸೃಷ್ಟಿ

Published:
Updated:
ತಾಪಮಾನ ಏರಿಕೆ ಮಾನವ ಸೃಷ್ಟಿ

ಸ್ಟಾಕ್‌ಹೋಮ್‌ (ಎಪಿ): 1950ರಿಂದ ಗಮನಿಸಿರುವ ಜಾಗತಿಕ ತಾಪಮಾನ ಏರಿಕೆಗೆ ಮಾನವನ ಚಟುವಟಿಕೆಗಳೇ ಪ್ರಧಾನ ಕಾರಣ ಎಂಬುದನ್ನು ವಿಜ್ಞಾನಿ­ಗಳು ಈಗ ಹೆಚ್ಚು ವಿಶ್ವಾಸದಿಂದ ಹೇಳ­ಬಹು­­ದಾಗಿದೆ ಎಂದು ಅಂತರ­ರಾಷ್ಟ್ರೀಯ ವೈಜ್ಞಾ­ನಿಕ ತಂಡವೊಂದು ಸಿದ್ಧಪಡಿಸಿ­ರುವ ಹೊಸ ವರದಿ ಶುಕ್ರವಾರ ತಿಳಿಸಿದೆ.ಹವಾ­ಮಾನ ವ್ಯವಸ್ಥೆಯ ಸ್ಥಿತಿಗತಿ­ಗಳ ಕುರಿತಾದ ತನ್ನ ಅಂದಾಜು ವರದಿ­ಯನ್ನು ಅಂಗೀ­ಕರಿಸಿರುವ ಹವಾ­ಮಾನ ವೈಪ­ರೀತ್ಯ­ದ ಮೇಲಿನ ಅಂತರ­ರಾಷ್ಟ್ರೀಯ ಸಮಿ­ತಿಯು (ಐಪಿಸಿಸಿ), ‘ಮಾನವ ಸೃಷ್ಟಿಯ  ತಾಪಮಾನ ಹೆಚ್ಚಳವು ಭಾರಿ ಅಪಾಯದ ಮಟ್ಟ­ಕ್ಕೇರಲಿದೆ’ ಎಂದು ಕಠಿಣ ಪದ­ಗಳಲ್ಲಿ ಎಚ್ಚರಿಸಿದೆ.ವಿಶ್ವಸಂಸ್ಥೆ ಪ್ರಾಯೋಜಿತ ಈ ಸಮಿ­ತಿಯು 2007ರಲ್ಲಿ ಮಂಡಿಸಿದ ತನ್ನ ಹಿಂದಿನ ಅಂದಾಜು ವರದಿಯಲ್ಲಿ ಜಾಗತಿಕ ತಾಪಮಾನ ಹೆಚ್ಚುವ ನಿರೀಕ್ಷೆ ಇದೆ’ ಎಂದು ತಿಳಿಸಿತು.‘ಹವಾಮಾನ ವ್ಯವಸ್ಥೆಯ  ಸ್ಪಷ್ಟ ತಿಳಿವಳಿಕೆ ­ಹಾಗೂ ಏರುತ್ತಿರುವ ಉಷ್ಣಾಂಶದ ಪರಿ­ಣಾಮಗಳ ವಿಶ್ಲೇಷಣೆಗೆ ಸುಧಾರಿತ ಮಾದರಿ­ಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಾಕ್ಷ್ಯ ಸಂಗ್ರಹ ಸಾಧ್ಯ­’ ಎಂದು ಸಮಿತಿ ತೃಪ್ತಿ ವ್ಯಕ್ತ­ಪಡಿಸಿದೆ.‘ವಾತಾವರಣ ಮತ್ತು ಸಾಗರ ಬಿಸಿ­ಯಾ­ಗಿ­­ರುವುದು, ಹಿಮ ಮತ್ತು ಮಂಜು­ಗಡ್ಡೆ ಪ್ರಮಾಣ ಕಡಿಮೆಯಾಗಿ­ರು­ವುದು, ಜಾಗ­ತಿಕ ಮಟ್ಟ­ದಲ್ಲಿ ಸಮುದ್ರ ಮಟ್ಟ ಏರಿಕೆಯಾಗಿ­ರು­ವುದು ಹಾಗೂ ಹಸಿರು­ಮನೆ ಅನಿಲ­ಗಳ ಕೇಂದ್ರೀ­ಕರಣ ಹೆಚ್ಚಾಗಿ­ರು­ವು­ದನ್ನು ವಿಜ್ಞಾನದ ಮೇಲಿನ ನಮ್ಮ ಅಂದಾಜು ವರದಿ ಗುರುತಿಸಿದೆ’ ಎಂದು ಇದನ್ನು ತಯಾರಿಸಿದ ಕಾರ್ಯ­ತಂಡದ ಸಹ ಅಧ್ಯಕ್ಷ ಖ್ವಿನ್‌ ದಾಹೆ ತಿಳಿಸಿದ್ದಾರೆ.2,000 ಪುಟಗಳ ಪೂರ್ಣ ವರದಿಯನ್ನು ಸೋಮವಾರದ ನಂತರ ಬಿಡುಗಡೆ ಮಾಡಲಿದೆ. ನೀತಿ ನಿರೂಪಕ­ರಿ­ಗಾಗಿ ವರದಿಯ ಸಂಕ್ಷಿಪ್ತ ಮುಖ್ಯಾಂಶ­ಗಳನ್ನು ಮಾತ್ರ  ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಈಗಾಗಲೇ ವರದಿಯ ಅನೇಕ ಅಂಶಗಳು ಸೋರಿಕೆ­ಯಾಗಿದ್ದು, ಸಂಕ್ಷಿಪ್ತ ವರದಿಯಲ್ಲಿ ಕೆಲವು ಅಚ್ಚರಿ ಅಂಶ­ಗಳು ಮಾತ್ರ ಇವೆ.ನಿರೀಕ್ಷೆಯಂತೆ, ಈ ಶತ­ಮಾ­ನದ ಅಂತ್ಯದ ಹೊತ್ತಿಗೆ ಸಮುದ್ರದ ಮಟ್ಟ 1032 ಇಂಚುಗಳಿಗೆ ಏರಿಕೆ­ಯಾ­ಗುತ್ತದೆ ಎಂದು  ಐಪಿಸಿಸಿ ಹೇಳಿದೆ. ಈ ಹಿಂದಿನ ವರದಿಯಲ್ಲಿ ಸಮುದ್ರ ಮಟ್ಟ 723 ಇಂಚುಗಳಷ್ಟು ಏರಿಕೆಯಾಗು­ವು­ದೆಂದು ಅಂದಾಜಿಸಿತ್ತು.ಈ ವರದಿಯು ಹೊಸ ಹವಾಮಾನ ಒಪ್ಪಂದದ ಮೇಲಿನ ವಿಶ್ವ­ಸಂಸ್ಥೆಯ ಸಮಾ­ಲೋ­ಚನೆಗೆ ವೈಜ್ಞಾನಿಕ ಆಧಾರ­ವಾಗು­ವುದ­ರಿಂದ ಬಹಳ ಮಹತ್ವದ್ದು. ಸರ್ಕಾರ­ಗಳು 2015ರಲ್ಲಿ ಈ ಒಪ್ಪಂದವನ್ನು ಅಂತ್ಯ­ಗೊಳಿಸಬೇಕಿದೆ.ಆದರೆ ಹವಾ­ಮಾನ ವೈಪರೀತ್ಯದ ಕೆಟ್ಟ ಪರಿ­ಣಾ­ಮಗಳನ್ನು ತಡೆಯಲು ಉಷ್ಣಾಂಶವನ್ನು ನಿಗದಿತ ಮಿತಿ­ಗಿಂತಲೂ ಕಡಿಮೆ ಮಟ್ಟ­ದಲ್ಲಿ ಕಾಯ್ದುಕೊಳ್ಳುವುದು ಅಗತ್ಯ ಎಂಬ ವಿಜ್ಞಾನಿ­ಗಳ ಸಲಹೆ­ಯಂತೆ, ಸರ್ಕಾ­ರ­ಗಳು ಇಂಗಾಲ ಹೊರ­ಸೂಸು­ವಿಕೆ ಕಡಿತಕ್ಕೆ ಬದ್ಧ­ವಾಗು­ತ್ತ­ವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry