ತಾಪಮಾನ ಮೂಡದ ಒಮ್ಮತ

7

ತಾಪಮಾನ ಮೂಡದ ಒಮ್ಮತ

Published:
Updated:
ತಾಪಮಾನ ಮೂಡದ ಒಮ್ಮತ

ದೋಹಾ (ಪಿಟಿಐ):  ಜಾಗತಿಕ ತಾಪಮಾನ ಬದಲಾವಣೆ ಕುರಿತಂತೆ ದೋಹಾದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಅನಿಶ್ಚಿತತೆ ತಲೆದೋರಿದೆ.

ಭೂಮಿಯನ್ನು ಜಾಗತಿಕ ತಾಪಮಾನ ಏರಿಕೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಸಿರಿವಂತ ರಾಷ್ಟ್ರಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಅಭಿವೃದ್ಧಿಶೀಲ ರಾಷ್ಟ್ರಗಳ ಬೇಡಿಕೆಗೆ ಅಮೆರಿಕ ನೇತೃತ್ವದ ಅಭಿವೃದ್ಧಿಗೊಂಡ ರಾಷ್ಟ್ರಗಳು ಜಗ್ಗದ ಹಿನ್ನೆಲೆಯಲ್ಲಿ ಉಭಯ ಕೂಟಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ.ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ಅಗತ್ಯ ಹಣಕಾಸು ನೆರವು ನೀಡಬೇಕು ಹಾಗೂ ಎಲ್ಲಾ ರಾಷ್ಟ್ರಗಳು ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂಬ ಅಭಿವೃದ್ಧಿಶೀಲ ರಾಷ್ಟ್ರಗಳ ಬೇಡಿಕೆಗಳು ವಿವಾದದ ಕೇಂದ್ರ ಬಿಂದುವಾಗಿದೆ.ಜಾಗತಿಕ ತಾಪಮಾನ ಬದಲಾವಣೆ  ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಮೂರು ಮಾರ್ಗಗಳು ಈ ಮಾತುಕತೆಯಲ್ಲಿ ಚರ್ಚೆಗೆ ಬಂದಿತ್ತು.

ಅಭಿವೃದ್ಧಿಶೀಲ ರಾಷ್ಟ್ರಗಳು ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸದ ಹೊರತು ಮೂರು ಮಾರ್ಗಗಳಲ್ಲಿ ಒಂದಾದ ಸುದೀರ್ಘ ಅವಧಿಯ ಸಹಕಾರ ಕ್ರಿಯಾ ಮಾರ್ಗವನ್ನು (ಎಲ್‌ಸಿಎ) ಕೊನೆಗೊಳಿಸಬಾರದು ಎಂದು ಮಾತುಕತೆ ಸಂದರ್ಭದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಒತ್ತಾಯಿಸಿದವು.ಹಲವು ಸುತ್ತಿನ ಮಾತುಕತೆ ಮತ್ತು ತಿದ್ದುಪಡಿಗಳ ಹೊರತಾಗಿಯೂ `ಎಲ್‌ಸಿಎ' ಕುರಿತಂತೆ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಗೊಂಡ ರಾಷ್ಟ್ರಗಳಿಗೆ ಈ ಸಂಬಂಧ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ.ಎಲ್‌ಸಿಎಯನ್ನು ಕೊನೆಗೊಳಿಸಲು ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ಒತ್ತಾಯಿಸಿದರೂ, ಭಾರತ, ಚೀನಾ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಇದನ್ನು ವಿರೋಧಿಸುತ್ತಿವೆ.ಆರ್ಥಿಕ ನೆರವು, ತಂತ್ರಜ್ಞಾನ ಸೇರಿದಂತೆ ಹಲವು ವಿಚಾರಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅಭಿವೃದ್ಧಿಶೀಲ ರಾಷ್ಟ್ರಗಳು ಆರೋಪಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry