ಭಾನುವಾರ, ಅಕ್ಟೋಬರ್ 20, 2019
28 °C

ತಾಯಿಗಿಂತ ಹಿರಿದು ಯಾವುದೂ ಇಲ್ಲ

Published:
Updated:

ಹೂವಿನಹಡಗಲಿ: ತಾಯಿಗಿಂತ ಹಿರಿದಾದುದು ಯಾವುದಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಸತೀಶ ಹೇಳಿದರು.ಪಟ್ಟಣದ ಸರ್ಕಾರಿ ಐ.ಟಿ.ಐ. ಕಾಲೇಜಿನಲ್ಲಿ ಕ.ಸಾ.ಪ. ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಯಿ ತನ್ನ ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸುತ್ತಾಳೆ ಆದರೆ ಆಧುನಿಕ ಜಗತ್ತಿನಲ್ಲಿ ನಾವು ತಾಯಿಯನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತಿದ್ದೇವೆ ಮತ್ತು ಸಲಹುತ್ತಿದ್ದೇವೆ ಎಂದು ನೋಡಿಕೊಳ್ಳಬೇಕಿದೆ ಎಂದರು.

ಡಾ.ರುದ್ರಪ್ಪ ಮಾತನಾಡಿ ಕೃಷಿ ಜಗತ್ತಿನಲ್ಲಿಯೇ ಅತ್ಯಂತ ಮೌಲ್ಯವಾದದ್ದು. ಮೇಟಿ ವಿದ್ಯೆ ಯಿಂದಲೇ ಜನರ ಬದುಕ ಬೇಕಿದೆ ಎಂದರು.ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷೆ ಮಾತನಾಡಿ ದತ್ತಿ ದಾನಿ ಗಳಿಂದಲೇ ರಾಜ್ಯ ಮೂಲೆ- ಮೂಲೆ ಗಳಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆದಿವೆ ಎಂದರು.ನೂತನವಾಗಿ ಕ.ಸಾ.ಪ.ಕ್ಕೆ ದತ್ತಿ ದಾನವನ್ನು ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು. ಕಿರಿಯ ತರಬೇತಿ ಅಧಿಕಾರಿ ಶಿವಾನಂದಪ್ಪ, ಯು. ಕೊಟ್ರೇಶ್ ನಾಯ್ಕ, ಗಡ್ಡಿ ಸಿದ್ದ ಲಿಂಗಪ್ಪ, ಟಿ.ಎಂ.ಕೊಟ್ರೇಶ್ ಇದ್ದರು.ಕಲಾವತಿ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಎಂ.ಎಂ. ಚಂದ್ರಶೇಖರಯ್ಯ ಸ್ವಾಗತಿಸಿದರು. ನಾಗರಾಜ ಮಲ್ಕಿಒಡೆಯರ್ ಮಾತ ನಾಡಿದರು. ವಿಶ್ವನಾಥ ನಿರೂಪಿಸಿದರು. ನಾಗರಾಜ ವಂದಿಸಿದರು.ಸಂಗೀತ ಕಾರ್ಯಕ್ರಮ

ಗದಗ: ಬಳಗಾನೂರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಗೀತೆಗೆ 100 ಸಂಭ್ರಮದ ಹಿನ್ನೆಲೆಯಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಾಗಾರವನ್ನು ಜ. 4ರಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

Post Comments (+)