ಶುಕ್ರವಾರ, ಏಪ್ರಿಲ್ 23, 2021
28 °C

ತಾಯಿಯ ಆಸೆ ಪೂರೈಸಿದ್ದಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: `ಪುತ್ರ ಚೇತೇಶ್ವರ ಪೂಜಾರ ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕು ಹಾಗೂ ದೊಡ್ಡ ಸಾಧನೆ ಮಾಡಬೇಕು ಎಂಬುದು ತಾಯಿಯ ಕೊನೆಯ ಆಸೆಯಾಗಿತ್ತು. ಆ ಕ್ಷಣವನ್ನು ಸವಿಯಲು ಆಕೆ ಈಗ ಬದುಕಿಲ್ಲ. ಆದರೆ ತಾಯಿಗೆ ಅಂದು ನೀಡಿದ ಮಾತನ್ನು ಉಳಿಸಿಕೊಂಡಿದ್ದಾನೆ~ ಎಂದು ಅರವಿಂದ್ ಪೂಜಾರ ನುಡಿದಿದ್ದಾರೆ. ಇಂಗ್ಲೆಂಡ್ ಎದುರು ಶುಕ್ರವಾರ ಪುತ್ರ ಚೇತೇಶ್ವರ ಗಳಿಸಿದ ದ್ವಿಶತಕದ ಸಂಭ್ರಮವನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡ ಅರವಿಂದ್, `ಬಾಲ್ಯದಿಂದ ಚೇತೇಶ್ವರ ದೈವಭಕ್ತ. ಹೆಚ್ಚಿನ ಸಮಯ ದೇವರ ಕೋಣೆಯಲ್ಲಿ ಕಳೆಯುತ್ತಾನೆ. ಆತ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬುದು ನನ್ನ ಪತ್ನಿ ರಿನಾಬೆನ್ ಕನಸಾಗಿತ್ತು. ಆಕೆ 2005ರಲ್ಲಿ ಸಾವನ್ನಪ್ಪಿದಳು. ಆದರೆ ಚೇತೇಶ್ವರ್ ಆಕೆಯ ಆಸೆ ಈಡೇರಿಸಿದ್ದಾನೆ~ ಎಂದರು.ಪೂಜಾರ ಅವರಿಗೆ ತಂದೆಯೇ ಕೋಚ್ ಹಾಗೂ ಮಾರ್ಗದರ್ಶಕ. ಅರವಿಂದ್ ಪೂಜಾರ ಮಾಜಿ ರಣಜಿ ಆಟಗಾರ ಕೂಡ. `ತಾಯಿಯ ಆಶೀರ್ವಾದ ಆತನೊಂದಿಗೆ ಸದಾ ಇರಲಿದೆ. ಈ ಆಟ ನೋಡಲು ಆಕೆ ಬದುಕಿರಬೇಕಿತ್ತು. ದೂರದ್ಲ್ಲಲೆಲ್ಲೊ ನಿಂತು ಆಟ ನೋಡುತ್ತಿರಬಹುದು~ ಎಂದು ಭಾವುಕರಾದರು.`ಭಾವಿ ಪತ್ನಿ ಪೂಜಾಗೂ ಈ ಶ್ರೇಯ ಸಲ್ಲಬೇಕು. ಪೂಜಾ ಈ ಪಂದ್ಯವನ್ನು ಕ್ರೀಡಾಂಗಣದಲ್ಲಿದ್ದು ವೀಕ್ಷಿಸಿದರು. ಆದರೆ ನಾನು ರಾಜ್‌ಕೋಟ್ ನಿವಾಸದಲ್ಲಿ ಟಿ.ವಿಯಲ್ಲಿ ವೀಕ್ಷಿಸಿದೆ. ತುರ್ತು ಕೆಲಸವಿದ್ದ ಕಾರಣ ಅಹಮದಾಬಾದ್‌ಗೆ ಬರಲು ಸಾಧ್ಯವಾಗಲಿಲ್ಲ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.