ತಾಯಿ, ಮಗಳು ಸಾವು: ಏಕಕಾಲಕ್ಕೆ ಅಂತ್ಯಕ್ರಿಯೆ

7

ತಾಯಿ, ಮಗಳು ಸಾವು: ಏಕಕಾಲಕ್ಕೆ ಅಂತ್ಯಕ್ರಿಯೆ

Published:
Updated:

ಮುದ್ದೇಬಿಹಾಳ: ಮದುವೆ ಮುಗಿಸಿ ಬಂದಿದ್ದ ಮಹಿಳೆಯೊಬ್ಬಳು ಸೋಮವಾರ ಸಂಜೆ ನಿಧನರಾದರೆ, ಮಂಗಳವಾರ ಬೆಳಿಗ್ಗೆ ಮೃತಳ ದೊಡ್ಡಮ್ಮ ಸಹ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಪಟ್ಟಣದಲ್ಲಿ ನಡೆದಿದೆ.ಗೀತಾ ಸಿದ್ರಾಮಪ್ಪ ನಾಶಿ (32) ಸೋಮವಾರ ಇಡೀ ದಿನ ಪಟ್ಟಣದಲ್ಲಿ ನಡೆದ ಬಂಧುಗಳ ಮದುವೆಯಲ್ಲಿ ಸಂಭ್ರಮದಿಂದ ಓಡಾಡಿ ಮದುವೆ ಮುಗಿಸಿದ್ದಳು. ಸಂಜೆ ಮನೆಗೆ ಬರುತ್ತಿದ್ದಂತೆಯೇ ತಲೆ ತಿರುಗಿ ಬಿದ್ದು ಕೊನೆಯುಸಿರೆಳೆದಿದ್ದಾಳೆ.  ಇದೇ ದು:ಖದಲ್ಲಿದ್ದ ಮನೆಯವರಿಗೆ ಮತ್ತೊಂದು ಆಘಾತವಾಗಿದೆ. ಮೃತಳ ದೊಡ್ಡಮ್ಮ ಸಂಗಮ್ಮ ಚಂದ್ರಶೇಖರ ನಾಶಿ ( 67) ಸಹ ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದಾಳೆ. ಈಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂಗಮ್ಮನ ಉಪಚಾರವನ್ನು ಮೃತ ಗೀತಾಳೇ ಸತತ ಮಾಡುತ್ತಿದ್ದಳು. ಮಂಗಳವಾರ ಇಬ್ಬರೂ ತಾಯಿ, ಮಗಳ ಶವವನ್ನು ಒಂದೇ ಟ್ರ್ಯಾಕ್ಟರ್‌ನಲ್ಲಿಟ್ಟು ತಂದು ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry