ತಾಯ್ತನದ ಸುಖವು

7

ತಾಯ್ತನದ ಸುಖವು

Published:
Updated:

ಚಿತ್ರ ನಿರ್ಮಾಪಕಿ ಕಿರಣ್‌ರಾವ್ ತಾವಿನ್ನೂ ಪರಿಪೂರ್ಣ ತಾಯಿಯಾಗಿಲ್ಲ. ಆದರೆ ತಾಯ್ತನವನ್ನು ಆನಂದಿಸುತ್ತಿರುವುದಾಗಿ ಹೇಳಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಬಾಡಿಗೆ ತಾಯ್ತನ ವಿಧಾನದ ಮೂಲಕ ಕಿರಣ್‌ರಾವ್ ಹಾಗೂ ಅಮೀರ್ ಖಾನ್ ಜೈವಿಕ ಪೋಷಕರಾಗಿದ್ದರು.ಮಗ ಆಜಾದ್‌ನೊಂದಿಗೆ ಪ್ರತಿದಿನವೂ ಹೊಸ ಪಾಠ ಕಲಿಯುತ್ತಿದ್ದೇನೆ. ತಾಯ್ತನವನ್ನು ಆನಂದಿಸುತ್ತಿದ್ದೇನೆ ಎಂದು ಕಿರಣ್‌ರಾವ್ ಮುಂಬೈನಲ್ಲಿ ಹೇಳಿಕೊಂಡಿದ್ದಾರೆ.

ಸದ್ಯದಲ್ಲಿಯೇ ಆಫ್‌ಬೀಟ್ ಚಿತ್ರಗಳಿಗಾಗಿ ಒಂದು ಸ್ಟುಡಿಯೊ ತೆರೆಯುವ ನಿಟ್ಟಿನಲ್ಲಿ ನಿರತರಾಗುವುದಾಗಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry