ತಾರತಮ್ಯ: ಕುಲಪತಿ ನಿವಾಸಕ್ಕೆ ಮುತ್ತಿಗೆ

7

ತಾರತಮ್ಯ: ಕುಲಪತಿ ನಿವಾಸಕ್ಕೆ ಮುತ್ತಿಗೆ

Published:
Updated:

ದಾವಣಗೆರೆ: ಹೊರ ಗುತ್ತಿಗೆಯ ಆಧಾರದಲ್ಲಿ 15-20 ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ್ಙ 1,500-2,500ದವರೆಗೆ ಸಂಬಳ. 15 ತಿಂಗಳ ಹಿಂದೆ ಇದೇ ರೀತಿ ನೇಮಕವಾದವರಿಗೆ ರೂ. 8 ಸಾವಿರ ಸಂಬಳ...ಇದು ದಾವಣಗೆರೆ ವಿವಿ ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ನಡುವೆ ಮಾಡುತ್ತಿರುವ ತಾರತಮ್ಯ. ಇದನ್ನು ವಿರೋಧಿಸಿ ವಿವಿ ಹೊರಗುತ್ತಿಗೆ ನೌಕರರು ಸೋಮವಾರ ವಿವಿ ಕುಲಪತಿ ಡಾ.ಎಸ್. ಇಂದುಮತಿ ನಿವಾಸಕ್ಕೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.ಯುಬಿಡಿಟಿ ಕಾಲೇಜು, ಲಲಿತ ಕಲಾ ಮಹಾ ವಿದ್ಯಾಲಯ ಹಾಗೂ ವಿವಿ ಕ್ಯಾಂಪಸ್‌ನಲ್ಲಿ ಕಳೆದ 15-20 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ನಿರ್ವಾಹಣೆ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಇದುವರೆಗೆ ಸಂಬಳ ್ಙ 1,500-2,500 ನೀಡುತ್ತಿದ್ದಾರೆ. ಆದರೆ, ವಿವಿ ಸ್ಥಾಪನೆಯಾದ ನಂತರ ಮೈಸೂರಿನಿಂದ ಕುಲಪತಿ ಕರೆದುಕೊಂಡು ಬಂದ 18 ಮಂದಿ ಗುತ್ತಿಗೆ ನೌಕರರಿಗೆ ್ಙ 8 ಸಾವಿರ ಸಂಬಳ ನೀಡಲಾಗುತ್ತಿದೆ. ಅಲ್ಲದೇ, ಅವರನ್ನು ಕಾಯಂಗೊಳಿಸುವ ಪ್ರಕ್ರಿಯೆಯೂ ನಡೆದಿದೆ ಎಂದು ಆರೋಪಿಸಿದರು.ಕೂಡಲೇ, ತಮ್ಮನ್ನು ಹಂತಹಂತವಾಗಿ ಕಾಯಂ ಗೊಳಿಸಬೇಕು. ಅಲ್ಲಿಯವರೆಗೂ ಮೈಸೂರು ಮಂದಿಗೆ ನೀಡುವಷ್ಟೇ ಸಂಬಳ ತಮಗೂ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕುಲಪತಿ ಇಂದುಮತಿ ಹಾಗೂ ಸಿಂಡಿಕೇಟ್ ಸದಸ್ಯ ಉದಯ್‌ಕುಮಾರ್ ಸಿಂಗ್ ಅವರಿಗೆ ಮಾತಿನ ಚಕಮಕಿ ನಡೆಯಿತು.ನಂತರ ವಿಧಾನ ಪರಿಷತ್ ಮಾಜಿ ಸದಸ್ಯ ಮುದೇಗೌಡ್ರು ವೀರಭದ್ರಪ್ಪ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮತ್ತಿತರರ ಸಮಕ್ಷಮದಲ್ಲಿ ತಡ ರಾತ್ರಿಯವರೆಗೂ ಮಾತುಕತೆ ಮುಂದುವರಿಯಿತು. ಕುಲಪತಿ ಮನೆ ಮುಂದೆ ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು. ಭರ್ತಿ ರ್ಯಾಲಿ: ಬೆಂಗಳೂರಿನ ಸಿಆರ್‌ಪಿಎಫ್ ಗ್ರೂಪ್ ಸೆಂಟರ್ ವತಿಯಿಂದ ಹಲವು ಹುದ್ದೆಗಳ ಭರ್ತಿಗಾಗಿ ಜ. 17ರಿಂದ 27ರವರೆಗೆ ರ್ಯಾಲಿ ಏರ್ಪಡಿಸಲಾಗಿದೆ. ಅದರಲ್ಲಿ ಹಲವು ಹುದ್ದೆಗಳು ಮಾಜಿ ಸೈನಿಕರಿಗಾಗಿಮೀಸಲಿರಿಸಲಾಗಿದೆ.ಹೆಚ್ಚಿನ ಮಾಹಿತಿಗೆ  www.crpf.nic.in ವೆಬ್‌ಸೈಟ್ ನೋಡಬಹುದು. ದೂ:  080-2856 7730/ 081 82-220925ಗೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry