ಗುರುವಾರ , ಅಕ್ಟೋಬರ್ 17, 2019
21 °C

ತಾರತಮ್ಯ ತಪ್ಪಿಸಿ

Published:
Updated:

ಬೆಳಗಾವಿಯ `ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ (1985) ಲೋಕಲ್ ಸೆಲ್ಫ್ ಗೌರ‌್ನಮೆಂಟ್~ ಎಂಬ ಸಂಸ್ಥೆಯ ಮೂಲಕ `ಡಿಪ್ಲೊಮೊ ಇನ್ ಹೆಲ್ತ್‌ಇನ್ಸ್‌ಪೆಕ್ಟರ್ ಕೋರ್ಸ್~ ಮುಗಿಸಿದವರನ್ನು ಕರ್ನಾಟಕ ಸರ್ಕಾರದ ಪೌರಾಡಳಿತ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ನೇಮಕಾತಿಗೆ ಪರಿಗಣಿಸುತ್ತದೆ.  ಆದರೆ ಆರೋಗ್ಯ ಇಲಾಖೆಯ ಹುದ್ದೆಗಳಿಗೆ ನಮ್ಮನ್ನು ಪರಿಗಣಿಸುತ್ತಿಲ್ಲ. ರಾಜ್ಯ ಸರ್ಕಾರದ ವೈದ್ಯಕೀಯ ಮಂಡಳಿ ನಡೆಸುವ ಡಿಪ್ಲೊಮೊ ಪದವೀಧರರನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಇದು ತಾರತಮ್ಯದ ಧೋರಣೆ. ಈ ಹಿಂದೆ ಮೂರು ಸಲ ನೇಮಕಾತಿ ಅವಕಾಶ ಕಳೆದುಕೊಂಡಿದ್ದೇವೆ. ಆರೋಗ್ಯ ಇಲಾಖೆಗೆ ಈ ಕುರಿತು ಮನವಿ ಸಲ್ಲಿಸಿದ್ದೇವೆ  ನಮ್ಮನ್ನು ಪರಿಗಣಿಸಬಹುದು ಎಂದು ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರು ಒಪ್ಪಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ ಈ ಕುರಿತು ಆದೇಶ ಹೊರಬಿದ್ದಿಲ್ಲ. ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು.

 

Post Comments (+)