ತಾರತಮ್ಯ ವಿರೋಧಿಸಿ ಹಮಾಲರ ಧರಣಿ
ಮಹಾಲಿಂಗಪುರ: ಕೃಷಿ ಉತ್ಪನ್ನ ಮಾರುಕಟ್ಟೆಯ ಮಲತಾಯಿ ಧೋರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹಮಾಲರ ಟ್ರೇಡ್ ಯೂನಿಯನ್ ವತಿಯಿಂದ ಭಾನುವಾರದಿಂದ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸದಲ್ಲಿ ತೊಡಗಿಕೊಂಡಿರುವ ಹಮಾಲರ ಟ್ರೇಡ್ ಯೂನಿಯನ್ ಸದಸ್ಯರಿಗೆ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಹಮಾಲರಿಗೆ ವಾಸಿಸಲು ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳುತ್ತಲೇ ಬಂದಿದ್ದು ಯೂನಿಯನ್ ಈ ಕುರಿತು ಅನೇಕ ಬಾರಿ ಕೃಷಿ ಮಾರುಕಟ್ಟೆಯ ಕಾರ್ಯದರ್ಶಿಗಳನ್ನು ಕೇಳುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟ್ರೇಡ್ ಯೂನಿಯನ್ ಅಧ್ಯಕ್ಷ ಪೈಗಂಬರ್ ಪೆಂಡಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಬಾಬುಸಾಬ್ ಬಿ.ಜಮಾದಾರ ಆರೋಪಿಸಿದ್ದಾರೆ.
ಹುಡ್ಕೋ ಯೋಜನೆ ಅಡಿಯಲ್ಲಿ 108 ಮನೆಗಳನ್ನು ಕಟ್ಟಿಸಿಕೊಡುವು ದಾಗಿ ಹೇಳಿ ಪ್ರತಿಯೊಬ್ಬ ಹಮಾಲರಿಂದ ರೂ. 5ಸಾವಿರ ಪಡೆದುಕೊಂಡು ಕೇವಲ 51 ಜನರಿಗೆ ಮಾತ್ರ ಮನೆಗಳನ್ನು ಕೊಟ್ಟು ಉಳಿದವರಿಗೆ ಹಣವನ್ನು ಮರಳಿಸಿದ್ದಾರೆ.
ಈಗಿನ ಸರ್ಕಾರವು ಜಾರಿಗೆ ತಂದಿರುವ ವಾಜಪೇಯಿ ಯೋಜನೆ ಹಾಗೂ ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ ಉಳಿದ 57 ಮನೆಗಳನ್ನು ಕಟ್ಟಿಸಿ ಕೊಡಬೇಕಿದ್ದು ಎಪಿಎಂಸಿ ಆವರಣದಲ್ಲಿ ಜಾಗೆ ಇಲ್ಲವೆಂದು ಸಬೂಬು ಹೇಳಲಾಗುತ್ತಿದೆ ಆದರೆ ಜಾನುವಾರು ಪ್ರಾಂಗಣದಲ್ಲಿ ಈ ಯೋಜನೆಗೆ ಸಾಕಾಗುವಷ್ಟು ಜಾಗೆ ಇರುವುದರಿಂದ ಆ ಜಾಗದಲ್ಲಿ 57 ಮನೆಗಳನ್ನು ಕಟ್ಟಿ ಕೊಡಬೇಕೆಂದು ಆಗ್ರಹಿಸಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನಿರಂತರ ಧರಣಿಯಲ್ಲಿ ಸುರೇಶ ಲಮಾಣಿ, ಬೂಜಪ್ಪ ಲಮಾಣಿ, ಬಾಬು ಸಾಬ್ ಕಬಾಡಿ, ಸಂಗಪ್ಪ ಮುರಗೋಡ, ಬಾದ್ರಾಸಾ ಜಮಾದಾರ, ದಾದಾಪೀರ್ ಕಬಾಡಿ, ಪ್ರಕಾಶ ಲಮಾಣಿ, ಶಂಕರ ನಡಕಟ್ನಿ, ನಾರಾಯಣ ಬೂದಾ, ಹನಮಂತ ಲಮಾಣಿ ಹಾಗೂ ಬಾಬೂಸಾಬ್ ಜಮಾದಾರ ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.