ತಾರೆಯರಿಗೊಂದು ಬ್ಯೂಟಿ ಸ್ಪಾ

7

ತಾರೆಯರಿಗೊಂದು ಬ್ಯೂಟಿ ಸ್ಪಾ

Published:
Updated:

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಮಾತಿನ ಶೈಲಿಯಿಂದಲೇ ಪ್ರಸಿದ್ಧಿ ಪಡೆದವರು ನಟ ಧೀರೇಂದ್ರ ಗೋಪಾಲ್. ಅವರ ಪುತ್ರಿ ವಿದ್ಯಾ ಶ್ರೀನಿವಾಸ್ ಸಹ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರ ಕಲಾವಿದರು, ಕಿರುತೆರೆ ಕಲಾವಿದರಿಗೆ ಅನುಕೂಲವಾಗುವಂತೆ ನಂದಿನಿ ಬಡಾವಣೆಯ ಸರಸ್ವತಿಪುರಂನಲ್ಲಿ  ‘ವೆರೈಟಿ ಬ್ಯೂಟಿ ಸ್ಪಾ’ ಎಂಬ ಬ್ಯೂಟಿ ಪಾರ್ಲರ್ ಆರಂಭಿಸಿದ್ದಾರೆ.ಆಧುನಿಕ ಮೇಕಪ್ ತಂತ್ರಜ್ಞಾನದ ಈ ಪಾರ್ಲರ್‌ನಲ್ಲಿ ಬ್ರಿಟನ್‌ನಿಂದ ಆಮದು ಮಾಡಿದ ಸೌಂದರ್ಯ ಸಾಮಗ್ರಿ ಬಳಸಲಾಗುತ್ತಿದೆ. ಕಲಾವಿದರು ಇಲ್ಲಿ ಅಲಂಕಾರ ಮಾಡಿಸಿಕೊಂಡು ನೇರ ಚಿತ್ರೀಕರಣಕ್ಕೆ ಹೋಗುವಂತೆ ಮೇಕಪ್ ಮಾಡಲಾಗುತ್ತದೆ. ನಟಿ ಅಶ್ವಿನಿ ಇತ್ತೀಚೆಗೆ ಈ ‘ವೆರೈಟಿ ಬ್ಯೂಟಿ ಸ್ಪಾ’ ಉದ್ಘಾಟಿಸಿದರು.                                   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry