ತಾಲಿಬಾನ್‌ನೊಂದಿಗೆ ಮಾತುಕತೆ: ಷರೀಪ್ ಸುಳಿವು

7

ತಾಲಿಬಾನ್‌ನೊಂದಿಗೆ ಮಾತುಕತೆ: ಷರೀಪ್ ಸುಳಿವು

Published:
Updated:
ತಾಲಿಬಾನ್‌ನೊಂದಿಗೆ ಮಾತುಕತೆ: ಷರೀಪ್ ಸುಳಿವು

ಇಸ್ಲಾಮಾಬಾದ್ (ಪಿಟಿಐ): ಪೇಶಾವರ ಚರ್ಚ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ತಾಲಿಬಾನ್‌ನೊಂದಿಗೆ ಶಾಂತಿ ಮಾತುಕತೆ ನಡೆಸುವ ಸುಳಿವು ನೀಡಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ಈ ದಾಳಿ ಖಂಡನೀಯ ಎಂದರು. ಮುಂದಿನ ದಿನಗಳಲ್ಲಿ ತಾಲಿಬಾನ್‌ನೊಂದಿಗೆ ಶಾಂತಿಯುತ ಮಾತುಕತೆ ನಡೆಸುವುದಾಗಿ ತಿಳಿಸಿದರು.ಈ ಸಂಬಂಧ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಷರೀಪ್ ತಿಳಿಸಿದರು.  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ  ಬಳಿಕ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗುವುದು ಎಂದು ಷರೀಪ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry