ತಾಲಿಬಾನ್‌ ಮುಖಂಡ ಶರಣು

7

ತಾಲಿಬಾನ್‌ ಮುಖಂಡ ಶರಣು

Published:
Updated:

ಕಾಬೂಲ್‌ (ಐಎಎನ್‌ಎಸ್‌): ತಾಲಿ­ಬಾನ್‌ ಪ್ರಮುಖ ಮುಖಂಡ­ನೊಬ್ಬ ಮಂಗಳವಾರ ಆಫ್ಘಾನಿ­ಸ್ತಾನದ ಉರು­ಜ್ಗಾನ್‌ ಪ್ರಾಂತ್ಯದಲ್ಲಿ ಶರಣಾಗಿ­ದ್ದಾನೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

‘ದಕ್ಷಿಣ ಪ್ರಾಂತ್ಯದ ಪ್ರಸಿದ್ಧ ತಾಲಿ­ಬಾನ್‌ ಮುಖಂಡ ಮುಲ್ಲಾ ಮೊಮಿನ್‌ ಮಂಗಳವಾರ ತಡರಾತ್ರಿ  ಡೇಹ್‌ ರಾವಡ್‌ ಜಿಲ್ಲೆಯ ಪೊಲೀಸರಿಗೆ ಶರಣಾಗಿದ್ದಾನೆ.  ಶಸ್ತ್ರಾಸ್ತ್ರಗಳನ್ನೂ ಪೊಲೀಸರಿಗೆ ಒಪ್ಪಿಸಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ಮುಖ್ಯಸ್ಥರು ತಿಳಿಸಿದ್ದಾರೆ.

‘ವಿದೇಶಿ ಸೈನ್ಯ ಉರುಜ್ಗಾನ್‌ ಪ್ರಾಂತ­ವನ್ನು ತೊರೆದ ನಂತರ ಅಲ್ಲಿನ ಸರ್ಕಾರದ ವಿರುದ್ಧ ಹೋರಾಡುವು­ದ­ರಲ್ಲಿ ಯಾವುದೇ ಅರ್ಥವಿಲ್ಲ’ ಎಂದು  ಮುಲ್ಲಾ ಮೊಮಿನ್‌ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.

ಉರುಜ್ಗಾನ್‌ನಲ್ಲಿ ಭದ್ರತಾ ವ್ಯವಸ್ಥೆ ನೋಡಿಕೊ­­ಳ್ಳು­ತ್ತಿದ್ದ ಆಸ್ಟ್ರೇಲಿಯಾ ಸೈನ್ಯ ಒಂದು ತಿಂಗಳ ಹಿಂದೆಯೇ ಮರಳಿ ಹೋಗಿ­ರು­ವುದರಿಂದ ಈಗ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು  ಆಫ್ಘಾನಿ­ಸ್ತಾನ ರಾಷ್ಟ್ರೀಯ ಭದ್ರತಾ ಪಡೆ ನೋಡಿಕೊಳ್ಳುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry