ತಾಲಿಬಾನ್ ಉಗ್ರರಿಂದ ಐಎಸ್‌ಐ ಮಾಜಿ ಅಧಿಕಾರಿ ಹತ್ಯೆ

7

ತಾಲಿಬಾನ್ ಉಗ್ರರಿಂದ ಐಎಸ್‌ಐ ಮಾಜಿ ಅಧಿಕಾರಿ ಹತ್ಯೆ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ಐಎಸ್‌ಐ ಸಂಸ್ಥೆಯ ಮಾಜಿ ಅಧಿಕಾರಿ ಕರ್ನಲ್ ಇಮಾಮ್ ಅವರನ್ನು ಉತ್ತರ ವಜೀರಿಸ್ತಾನದಲ್ಲಿ ಪಾಕ್ ತಾಲಿಬಾನಿಯರು ಭಾನುವಾರ ಹತ್ಯೆ ಮಾಡಿದ್ದಾರೆ.ಇಮಾಮ್ ಅವರನ್ನು ಪಾಕಿಸ್ತಾನ ತಾಲಿಬಾನಿಯರು 2010ರ ಮಾರ್ಚ್ ತಿಂಗಳಿನಲ್ಲಿ ಅಪಹರಿಸಿದ್ದರು.ಈ ಅಧಿಕಾರಿಯ ನಿಜವಾದ ಹೆಸರು ಸುಲ್ತಾನ್ ಅಮೀರ್ ತರಾರ್.ಅವರು ಇನ್ನೊಬ್ಬ ಐಎಸ್‌ಐ ಮಾಜಿ ಅಧಿಕಾರಿ ಖಾಲಿದ್ ಖ್ವಾಜಾ, ಬಿಬಿಸಿ ವರದಿಗಾರ ಅಸಾದ್ ಖುರೇಶಿ ಮತ್ತು ಚಾಲಕ ರುಸ್ತುಂ ಖಾನ್ ಜತೆ ಉತ್ತರ ವಜೀರಿಸ್ತಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಪಾಕಿಸ್ತಾನ ತಾಲಿಬಾನ್ ಜತೆ ಸೇರಿ ಚಟುವಟಿಕೆ ನಡೆಸುತ್ತಿರುವ ಲಷ್ಕರ್-ಎ-ಜಾಂಗ್ವಿ ಸಂಘಟನೆಯವರು ಅಪಹರಿಸಿದ್ದರು.ಆ ಪೈಕಿ ಖ್ವಾಜಾ ಅವರನ್ನು ಐಎಸ್‌ಐ ಮತ್ತು ಅಮೆರಿಕ ಸಿಐಎ ಪರವಾಗಿ ಕೆಲಸ ಮಾಡುವ ಆರೋಪದ ಮೇಲೆ 2010ರ ಏಪ್ರಿಲ್ 30ರಂದು ಹತ್ಯೆ ಮಾಡಲಾಗಿತ್ತು ಎಂದು ಜಿಯೊ ಟಿವಿ ವಾಹಿನಿ ವರದಿ ಮಾಡಿದೆ.ಬಿಬಿಸಿ ವರದಿಗಾರ ಖುರೇಶಿ ಮತ್ತು ವಾಹನ ಚಾಲಕ ರುಸ್ತುಂನನ್ನು 2010ರ ಆಗಸ್ಟ್ ತಿಂಗಳಿನಲ್ಲಿ ಮೂರು ಕೋಟಿ ರೂಪಾಯಿ ಒತ್ತೆ ಹಣ ನೀಡಿದ ನಂತರ ಬಿಡುಗಡೆ ಮಾಡಲಾಗಿತ್ತು.ಆದರೆ ಇಮಾಮ್ ಬಿಡುಗಡೆಗೆ ತಾಲಿಬಾನ್ ಐದು ಕೋಟಿ ರೂಪಾಯಿ ಒತ್ತೆ ಹಣದ ಬೇಡಿಕೆ ಸಲ್ಲಿಸಿತ್ತು.ಈ ಕುರಿತು ಸಂಧಾನ ಮತ್ತು ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಅವರನ್ನು ಹತ್ಯೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry