ತಾಲಿಬಾನ್ ಉಗ್ರರ ದಾಳಿ : 11 ಸಾವು

7

ತಾಲಿಬಾನ್ ಉಗ್ರರ ದಾಳಿ : 11 ಸಾವು

Published:
Updated:
ತಾಲಿಬಾನ್ ಉಗ್ರರ ದಾಳಿ : 11 ಸಾವು

ಕಾಬೂಲ್ (ಐಎಎನ್‌ಎಸ್) : ನ್ಯಾಟೋ ಪಡೆಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದ ಅಮೆರಿಕ ಮೂಲದ ಪ್ರಮುಖ ನೆಲೆಯೊಂದರ ಮೇಲೆ ಮಂಗಳವಾರ ಬೆಳಗ್ಗೆ ತಾಲಿಬಾನ್ ಉಗ್ರರು ನಡೆಸಿದ ಪ್ರಬಲ ದಾಳಿಯಿಂದಾಗಿ ಕನಿಷ್ಠ 11 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದರು.

ಇಬ್ಬರು ವಾಹನ ಚಾಲಕರು, ನೇಪಾಳದ ನಾಲ್ವರು ಮತ್ತು ಆಫ್ಘಾನ್  ಓರ್ವ ಗಾರ್ಡ್ ಹಾಗೂ ನಾಲ್ವರು ಉಗ್ರರು ದಾಳಿಯಲ್ಲಿ ಮೃತಪಟ್ಟಿರುವುದಾಗಿ ಕ್ಷಿನುವಾ ವರದಿ ಮಾಡಿದೆ.

ಕಾಬೂಲ್‌ನಿಂದ ಬಗ್ರಾಂಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಬಳಿಯ ನೆಲೆಯ ಪ್ರವೇಶದ್ವಾರದ ಬಳಿ ಟ್ರಕ್ ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಯಿತು. ಈ ವೇಳೆ ಮೂವರು ಶಸ್ತ್ರಸಹಿತ ಆತ್ಮಾಹುತಿ ದಾಳಿಕೋರರು ಒಳನುಸುಳಲು ಪ್ರಯತ್ನಿಸಿದರು ಎಂದು ಕಾಬೂಲ್ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಅಯೂಬ್ ಸಾಲಂಗಿ ವರದಿಗಾರರಿಗೆ ಮಾಹಿತಿ ನೀಡಿದರು.

ಸ್ಫೋಟದಿಂದಾಗಿ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು, ನೆಲೆಯ ಕಾಂಪೌಂಡ್ ಮುಂಭಾಗದಲ್ಲಿ ದೊಡ್ಡದಾದ ಕಂದಕ ಏರ್ಪಟ್ಟಿದೆ. ಈ ಸ್ಫೋಟದ ಹೊಣೆಯನ್ನು ತಾಲಿಬಾನ್ ಉಗ್ರರ ಸಂಘಟನೆ ಹೊತ್ತುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry