ಶನಿವಾರ, ನವೆಂಬರ್ 23, 2019
18 °C

ತಾಲಿಬಾನ್ ದಾಳಿಗೆ 53 ಬಲಿ

Published:
Updated:

ಕಾಬೂಲ್ (ಎಪಿ): ಫರಾ ಪ್ರಾಂತ್ಯದಲ್ಲಿರುವ ಆಫ್ಘಾನಿಸ್ತಾನದ ಕೋರ್ಟ್ ಸಂಕೀರ್ಣದ ಮೇಲೆ ಬುಧವಾರ ತಾಲಿಬಾನ್ ಉಗ್ರರು ನಡೆಸಿದ ದಾಳಿಗೆ ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ.ವಿಚಾರಣೆ ಎದುರಿಸುತ್ತಿರುವ ತಾಲಿಬಾನ್ ಬಂಡುಕೋರರನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಕೋರ್ಟ್ ಆವರಣದ ಮೇಲೆ ದಾಳಿ ನಡೆಸಲಾಗಿದೆ. ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ ತಾಲಿಬಾನ್ ಉಗ್ರರು ನಡೆಸಿದ ಅತ್ಯಂತ ಅಮಾನುಷ ದಾಳಿ ಇದಾಗಿದೆ. (ಕಾಬೂಲ್‌ನಲ್ಲಿರುವ ಶಿಯಾ ಮುಸ್ಲಿಂ ಪ್ರಾರ್ಥನಾ ಮಂದಿರದ ಮೇಲೆ 2011ರ ಡಿಸೆಂಬರ್‌ನಲ್ಲಿ ನಡೆದ ದಾಳಿಯಲ್ಲಿ 88 ಮಂದಿ ಮೃತಪಟ್ಟಿದ್ದರು)`ಆಫ್ಘನ್ ಯೋಧರ ಸೋಗಿನಲ್ಲಿ ಬಂದ ಆತ್ಮಹತ್ಯಾ ದಾಳಿಕೋರರು ಕೋರ್ಟ್ ಆವರಣಕ್ಕೆ ಲಗ್ಗೆ ಇಟ್ಟರು. ಮೃತಪಟ್ಟರಲ್ಲಿ 9 ದಾಳಿಕೋರರು ಹಾಗೂ 10 ಮಂದಿ ಭದ್ರತಾ ಸಿಬ್ಬಂದಿ ಕೂಡ ಇದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷದ ಅಂತ್ಯದಲ್ಲಿ ನ್ಯಾಟೊ ಪಡೆಯು ಮರಳಿದ ಬಳಿಕ ಆಫ್ಘಾನಿಸ್ತಾನಕ್ಕೆ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಈ ದಾಳಿ ಹುಟ್ಟುಹಾಕಿದೆ.

ಪ್ರತಿಕ್ರಿಯಿಸಿ (+)