`ತಾಲ್ಲೂಕಿನಲ್ಲಿ ನ್ಯಾಯ ಮರೀಚಿಕೆ'

7

`ತಾಲ್ಲೂಕಿನಲ್ಲಿ ನ್ಯಾಯ ಮರೀಚಿಕೆ'

Published:
Updated:

ದೇವದುರ್ಗ: ತಾಲ್ಲೂಕಿನಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂಬ ರೀತಿಯಲ್ಲಿ ಜನ ಸಾಮಾನ್ಯರಿಗೆ ಸಿಗಬೇಕಾದ ನ್ಯಾಯ, ಶಾಂತಿ ಮತ್ತು ಅಭಿವೃದ್ಧಿ ಎಂಬುವುದು ಮರೀಚಿಕೆಯಾಗಿದೆ. ಇದನ್ನು ಕೊನೆಗಾಣಿಸಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಸತೀಶ ಜಾರಕಿಹೊಳೆ ಆರೋಪಿಸಿದರು.ಸೋಮವಾರ ತಾಲ್ಲೂಕಿನ ಅರಕೇರಾ ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ತಾಲ್ಲೂಕಿನ ಮತದಾರರು ಕಳೆದ ಐದು ವರ್ಷದ ಅವಧಿಯಲ್ಲಿ ಅನುಭವಿಸಿದ ಕಷ್ಟ, ತೊಂದರೆಗಳನ್ನು ನಾನು ತಿಳಿದುಕೊಂಡಿದ್ದೇನೆ ಇದಕ್ಕೆ ಮುಕ್ತಿ ಕಾಣಬೇಕಾದರೆ ಬದಲಾವಣೆ ಅವಶ್ಯಕವಾಗಿದ್ದು, ಈಗ ಒಳ್ಳೆಯ ಸಮಯ ಬಂದಿದೆ ಮತದಾರರು ಗಟ್ಟಿಯಾಗಿ ನಿಂತುಕೊಂಡು ರಾಜಕೀಯ ಇತಿಹಾಸ ಇರುವ ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕ ಅವರನ್ನು ಗೆಲ್ಲಿಸಿ ನೆಮ್ಮದಿಯ ವಾತವರಣ ನಿರ್ಮಾಣ ಮಾಡಿಕೊಳ್ಳಿ ಎಂದರು.ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರ ಒಲವು ಚೆನ್ನಾಗಿ ಇದೆ. ಕನಿಷ್ಠ 120 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸುವ ಮೂಲಕ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.ಜಿಲ್ಲೆಯಲ್ಲಿ ಈಗಾಗಲೇ ಮೂರು ಜನ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದಾರೆ ಈ ಬಾರಿ ಜಿಲ್ಲೆಯ ಒಟ್ಟು ಏಳು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ಬಗ್ಗೆ ವಿಶ್ವಾಸ ಇದೆ ಎಂದರು.ಆರೋಪ ಸಾಬೀತು ಇಲ್ಲ: ರಾಯಚೂರು ಗ್ರಾಮೀಣ ಮತ್ತು ಮಾನ್ವಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ವಿಳಂಬದ ಹಿಂದಿನ ರಹಸ್ಯ ಏನು ಎಂದು ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರದಲ್ಲಿಯೇ ಹಾಲಿ ಶಾಸಕರ ಹೆಸರು ಪ್ರಕಟವಾಗಲಿದೆ ಎಂದರು. ಅಡ್ಡಮತದಾನ ಬಗ್ಗೆ ಇದುವರಿಗೂ ಯಾರ ವಿರುದ್ದವು ಆರೋಪ ಸಾಬೀತು ಆಗದೆ ಇರುವುದರಿಂದ ಟಿಕೇಟ್ ನೀಡದೆ ಇರುವುದಕ್ಕೆ ಅಂಥ ವಿಚಾರ ಪಕ್ಷದ ಮಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಅಧಿಕಾರ ಬೇಕಿಲ್ಲ: ಮಾಜಿ ಸಂಸದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ವೆಂಕಟೇಶ ನಾಯಕ ಅವರು ಮಾತನಾಡಿ, ನನ್ನಗೆ 78 ವರ್ಷ ತುಂಬಿದೆ. ಅಧಿಕಾರ ಮತ್ತು ಹಣದ ಆಸೆ ನನ್ನಗೆ ಇಲ್ಲ. ನನ್ನನ್ನು ಚುನಾಯಿಸಿದರೆ ಮತದಾರರೆ ಶಾಸಕರು ಎಂದು ಭಾವಿಸುತ್ತೇನೆ ಎಂದ ಅವರು, ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ಐದು ವರ್ಷದ ಆಡಳಿತದಲ್ಲಿ ತಾಲ್ಲೂಕಿನಲ್ಲಿ ನಡೆಬಾರದೆಲ್ಲ ನಡೆದು ಜನರು ನೆಮ್ಮದಿಯಿಂದ ಬದಕಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಕಾರ್ಯಕ್ರಮದಲ್ಲಿ ರಾಯಚೂರು ಗ್ರಾಮೀಣ ಶಾಸಕ ರಾಜಾ ರಾಯಪ್ಪ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಿಗಿ ಮುಖಂಡರಾದ, ಬಿ.ವಿ. ನಾಯಕ, ಅಮರೇಗೌಡ ಹಂಚಿನಾಳ, ಬಸ್ಸಯ್ಯ ಸಾಕೆ, ಭೀಮನಗೌಡ, ರಾಜಶೇಖರ ನಾಯಕ, ರಾಮಣ್ಣ ಇರಬಗೇರಾ, ಬಾಪೂಗೌಡ ಪಾಟೀಲ, ಅಕ್ಕಮಾಹದೇವಿ ರವಿರಾಜ ಪಾಟೀಲ, ಕರೆಯಮ್ಮ ಗೋಪಾಲಕೃಷ್ಣ, ಶೇಖ್ ಮುನ್ನಾಬಾಯಿ, ಲಕ್ಷ್ಮಣ ಗೋಸಲ, ನಾಗಪ್ಪ ಗಿರಿಣಿ, ಫಾರುಖ್ ಆಹ್ಮದ್, ಹಾಗೂ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry