ಗುರುವಾರ , ಜನವರಿ 23, 2020
19 °C

ತಾಲ್ಲೂಕು ಅಭಿವೃದ್ಧಿಗೆ ರೂ 100 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ತಾಲ್ಲೂಕಿನ ಕೊಳ್ಳೋರ­ಪಲ್ಲಿ ಗ್ರಾಮದಲ್ಲಿ ಬುಧವಾರ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ಬಾರೆಡ್ಡಿ, ತಾಲ್ಲೂಕಿನ ರಸ್ತೆ, ಶಿಕ್ಷಣ, ಬೀದಿದೀಪ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ₨ 100 ಕೋಟಿ ಮೊತ್ತದ ಯೋಜನೆ ಜಾರಿಯಾಗಲಿದೆ ಎಂದರು.ಶಾಸಕರು ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ ಎಂದು ಕೆಲ ರಾಜಕೀಯ ವಿರೋಧಿಗಳು ಆರೋಪಿ­ಸುತ್ತಿ­ದ್ದಾರೆ. ನಾನು ಆಯ್ಕೆಯಾಗಿ ಕೇವಲ 7 ತಿಂಗಳಾಗಿದೆ. 2 ಬಾರಿ ಅಧಿ­ವೇಶನದಲ್ಲಿ ಭಾಗವಹಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕುರಿತು ಒಂದು ಪಟ್ಟಿ ಸಿದ್ಧಪಡಿಸಿದ್ದು ಅದರಂತೆ ಕಾರ್ಯ­ನಡೆಸುತ್ತಿದ್ದೇನೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಮಾತನಾಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಶ್ರೀನಿವಾಸ್, ಸರ್ಕಲ್ ಇನ್ಸ್‌ಪೆಕ್ಟರ್ ಸಿ.ವಸಂತ್, ಜಿಲ್ಲಾ ಪಂಚಾಯಿತಿ ಎಂಜಿನಿ­ಯರ್ ಪಿ.ವಿ.ನಾಗಪ್ಪ, ಪಾತ­ಪಾಳ್ಯ ಸಬ್ ಇನ್ಸ್ ಪೆಕ್ಟರ್ ಎಂ.ಆರ್.­ನಟರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಅಶ್ವತ್ಥಪ್ಪ, ಮುಖಂಡರಾದ ಚೆಂಡೂರು ವೆಂಕಟೇಶ್, ಶ್ರೀನಿವಾಸರೆಡ್ಡಿ, ವೆಂಕಟ­ರಾಮರೆಡ್ಡಿ, ರೆಡ್ಡಪ್ಪ, ಸೋಮಶೇಖರ, ರಘುನಾಥರೆಡ್ಡಿ, ಅಮರನಾಥರೆಡ್ಡಿ, ಜಮೀರ್, ಯೋಗೇಶ್, ಎಸ್.ಎನ್.­ವೆಂಕಟರಮಣರೆಡ್ಡಿ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)