ತಾಲ್ಲೂಕು ಆಡಳಿತದ ವಿರುದ್ಧ ಧರಣಿ

ಶುಕ್ರವಾರ, ಜೂಲೈ 19, 2019
22 °C

ತಾಲ್ಲೂಕು ಆಡಳಿತದ ವಿರುದ್ಧ ಧರಣಿ

Published:
Updated:

ಮುಳಬಾಗಲು: ನಂಗಲಿ, ಮುಷ್ಟೂರು, ನೆಗವಾರ ಸೇರಿದಂತೆ ತಾಲ್ಲೂಕಿನಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಜಮೀನುಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದು ಸೇರಿದಂತೆ 15 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಪಟ್ಟಣದ ಮಿನಿವಿಧಾನಸೌಧದ ಎದುರು ದಲಿತ ಸಂಘರ್ಷ ಸಮಿತಿ, ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ, ರೈತ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ದೊಡ್ಡಕೆರೆ ನಂಗಲಿ ಕೆರೆಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಬೇಕು. ದಲಿತರ ಕುಂದುಕೊರತೆ ಸಭೆ ನಡೆಸಬೇಕು. ಜಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್ 103ರ 36 ಎಕರೆ ಭೂಮಾಫಿಯ ವಶವಾಗಿರುವುದನ್ನು ತೆರವುಗೊಳಿಸಿ ಜಮೀನು ರಹಿತ ಬಡ ದಲಿತರಿಗೆ ಹಂಚಬೇಕು.ಟೆಂಡರ್ ಮೂಲಕ ನಡೆಯುತ್ತಿರುವ ನೆಮ್ಮದಿ ಕೇಂದ್ರಗಳಿಂದ ಸಾರ್ವಜನಿಕರಿಗೆ ನೆಮ್ಮದಿ ಇಲ್ಲವಾಗಿರುವ ಕಾರಣ ನೆಮ್ಮದಿ ಕೇಂದ್ರಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ದಸಸಂ ಸಂಚಾಲಕ ಕೀಲುಹೊಳಲಿ ಸತೀಶ್, ಎಂ.ಸಿ.ಮಂಜುನಾಥ್, ಜಗದೀಶ್, ಶ್ರೀರಾಮ್, ಬಂಗಾವಾದಿ ಶ್ರೀನಿವಾಸ್, ಪಿ.ಎಲ್.ಅಮತಯ್ಯ, ವೆಂಕಟರಾಮಪ್ಪ, ಕಲಾಮಂಡಳಿ ನರಸಿಂಹ ಇತರರು ಭಾಗವಹಿಸಿದ್ದರು. ನಂತರ ತಹಶೀಲ್ದಾರ್ ಪಿ.ಜಯಮಾಧವ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry