ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

7

ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

Published:
Updated:

ಚಿಕ್ಕಮಗಳೂರು: ನಗರದ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಇಂದು ಮುಜರಾಯಿ ಶಾಖೆ, ಚುನಾವಣೆ ಶಾಖೆ, ಅಟಲ್ ಜಿ ಜನ ಸ್ನೇಹಿ ಕೇಂದ್ರ, ಹಕ್ಕುದಾಖಲೆ ಶಾಖೆ, ಸಾಮಾಜಿಕ ಭದ್ರತಾ ಯೋಜನಾ ಶಾಖೆ, ಅಕ್ರಮ ಸಕ್ರಮ ಶಾಖೆ, ಭೂಮಿ ಕೇಂದ್ರ, ನ್ಯಾಯಾಂಗ ವಿಭಾಗ, ಸಕಾಲ ಅರ್ಜಿ ಕೇಂದ್ರ, ಆಹಾರ ವಿಭಾಗ ಸೇರಿದಂತೆ ವಿವಿಧ ಮತ್ತಿತರೆ ವಿಭಾಗಗಳನ್ನು ಪರಿಶೀಲಿಸಿದರು.  ಭೂಮಿ ಕೇಂದ್ರದಲ್ಲಿ ಭೂ ನೋಂದ ಣಿಯ ದಾಖಲೆಗಳ ಹಕ್ಕು ಬದಲಾವಣೆ ಗಳನ್ನು ಮಾಡುವಾಗ ಅನುಸರಿಸುವ ಕ್ರಮ ಮತ್ತು ಅವುಗಳನ್ನು ಕಾನೂನು ರೀತಿಯಲ್ಲಿ ಎಷ್ಟು ದಿನದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂಬು ದರ ಬಗ್ಗೆ ಮಾಹಿತಿ ಪಡೆದು, ಕಾನೂನಿನ ಚೌಕಟ್ಟಿನಲ್ಲಿ ನಿಯಮಾನು ಸಾರ ಶೀಘ್ರದಲ್ಲಿ ವಿಲೇವಾರಿ ಮಾಡಬೇಕು. ಭೂಮಿ ಕೇಂದ್ರ, ಕಂಪ್ಯೂಟರ್, ವಿದ್ಯುತ್‌ಚ್ಛಕ್ತಿ ಸೌಲಭ್ಯ, ಬ್ಯಾಟರಿಗಳು ಮತ್ತಿತರ ಉಪಕರಣಗಳ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.  ಸಾಮಾಜಿಕ ಭದ್ರತೆ ಶಾಖೆಯಲ್ಲಿ ನಿರ್ಗತಿಕ ವಿಧವಾ ವೇತನ, ಮನಸ್ವಿನಿ, ಅಂಗಲವಿಕಲರ ವೇತನ, ಸಂದ್ಯಾ ಸುರಕ್ಷಾ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಗಳ ಅರ್ಜಿ ಸ್ವೀಕೃತ ಗೊಂಡ ದಿನಗಳಿಂದ ಎಷ್ಟು ದಿನಗಳ ಒಳಗೆ ವಿಲೇವಾರಿಯಾಗಿರುವ ಬಗ್ಗೆ ಪರಿಶೀಲಿಸಿ, ಆದಷ್ಟು ಬೇಗ ಆರ್ಥಿಕ ವಾಗಿ ದುರ್ಬಲವಾಗಿ ರುವವ ರಿಗೆ ಆಧ್ಯತೆ ಮೇರೆಗೆ ವಿಲೇಮಾಡಲು ಸೂಚಿಸಿದರು.ಪಹಣಿ ಹಾಗೂ ಮ್ಯೂಟೇಷನ್‌ಗಳ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ವಿತರಣೆ ವ್ಯವಸ್ಥೆ ಪರಿಶೀಲಿಸಿದ ಬಳಿಕ ರೈತರಿಗೆ ತೊಂದರೆಯಾಗದಂತೆ ವಿಳಂ ಬಕ್ಕೆ ಅವಕಾಶ ನೀಡದೇ ದಾಖಲೆಗಳ ನ್ನು ನೀಡಬೇಕೆಂದು  ತಿಳಿಸಿದರು.ಕಂದಾಯ ಇಲಾಖೆ ವತಿಯಿಂದ ನೀಡುವ ಜನನ ಮರಣ ಪ್ರಮಾಣ ಪತ್ರ, ಆದಾಯ ಪ್ರಮಾಣ, ಜಾತಿ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಜೀವಂತ, ಕುಟುಂಬ ಸದಸ್ಯರ ಪ್ರಮಾಣದ ಭೂರಹಿತ ಪ್ರಮಾಣ ಪತ್ರ, ಕೃಷಿಕ ಕಾರ್ಮಿಕ ಪ್ರಮಾಣ ಪತ್ರ, ಪರಿವರ್ತನೆಯ ಉದೃತ ಹಾಗೂ ಮತ್ತಿತರ ಪ್ರಮಾಣ ಪತ್ರ ನೀಡು ತ್ತಿರುವ ಕಾಲಮಿತಿಯನ್ನು ಅನುಸರಿಸು ತ್ತಿರುವ ಬಗ್ಗೆ ಸಹ ವಿವರವಾಗಿ ಪರಿಶೀಲಿಸಿದರು.

  ಭೂದಾಖಲೆ ಕೋಣೆಗೆ ಭೇಟಿ ನೀಡಿ ಸ್ವೀಕರಿಸಿ ದಾಖಲಾದ ಕಡತಗಳನ್ನು ಕ್ರಮವಾಗಿ ಹೋಬಳಿ ಗ್ರಾಮ ಹಾಗೂ ವರ್ಷವಾರು ಪ್ರತ್ಯೇಕಿಸಿ ವ್ಯವಸ್ಥಿತವಾಗಿ ಜೋಡಿಸಿ ನಿರ್ವಹಿಸುವಂತೆ ಸಲಹೆ ನೀಡಿದರು ಹಾಗೂ ದಾಖಲೆಗಳನ್ನು ಕೋರಿ ಬಂದ ಸಾರ್ವಜನಿಕರನ್ನು ಸಂಪ ರ್ಕಿಸಿ ಅವರ ಅಹವಾಲು ಆಲಿಸಿ ಅವರ ದಾಖಲೆ ನೀಡಲು ಸೂಚಿಸಿದರು.ಆಹಾರ ಶಾಖೆಯಲ್ಲಿ ಪಡಿತರ ಚೀಟಿಗಳನ್ನು ಕೋರಿ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಕಾರ್ಯ ಮತ್ತು ನವೀಕರಣ ಹಾಗೂ ರದ್ದು ಪಡಿಸುವ ಅರ್ಜಿಗಳ ವಿಲೇವಾರಿ ಬಗ್ಗೆ ಅರ್ಜಿದಾರನಿಗೆ ಇಲಾಖೆ  ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿ ರುವವರ ಬಗ್ಗೆ ಮಾಹಿತಿ ಪಡೆದರು. ಅವರು ಪಡಿತರ ವಿತರಣೆ ಸಮರ್ಪಕ ವಾಗಿ ಆಗುತ್ತಿರುವ ಬಗ್ಗೆಯು ಮಾಹಿತಿ ಪಡೆದರು.ಅನುಪಯುಕ್ತ ಪೀಠೋಪಕರಣಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲು, ಕಚೇರಿ ಆವರಣಗಳ ಸ್ವಚ್ಛತೆ ಹಾಗೂ ಸುವ್ಯವಸ್ಥೆ ಕಾಪಾಡಲು ತಹಶೀಲ್ದಾ ರರಿಗೆ ಸೂಚಿಸಿದರು.   ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವೇಗೌಡ, ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry