ಮಂಗಳವಾರ, ಏಪ್ರಿಲ್ 20, 2021
25 °C

ತಾಲ್ಲೂಕು ಕೇಂದ್ರಕ್ಕೆ ಸಂಪುಟ ಅಸ್ತು:ಕಿತ್ತೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವ ಆಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಣೆ ಮಾಡಿದ್ದ ಕಿತ್ತೂರು ತಾಲ್ಲೂಕು ರಚನೆ ಪ್ರಸ್ತಾವಕ್ಕೆ ಮಂಗಳವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಪಟ್ಟಣದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.ಸಚಿವ ಸಂಪುಟದ ಅನುಮೋದನೆ ಸುದ್ಧಿ ತಿಳಿಯುತ್ತಿದ್ದಂತೆ ನಾಗರಿಕರು ಸೋಮವಾರ ಪೇಟೆಯ ಚನ್ನಮ್ಮ ವರ್ತುಲದ ಎದುರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಕಚೇರಿ ಬರಲಿ: ಸಚಿವ ಸಂಪುಟ ಸಭೆಯ ಅನುಮೋದನೆಗೆ ಹರ್ಷ ವ್ಯಕ್ತ ಪಡಿಸಿ ಮಾತನಾಡಿದ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, `ತಾಲ್ಲೂಕಿಗೆ ಅಗತ್ಯವಿರುವ ಎಲ್ಲ ಇಲಾಖಾ ಕಚೇರಿಗಳು ಪಟ್ಟಣದಲ್ಲಿ ಶೀಘ್ರ ಕಾರ್ಯಾರಂಭ ಮಾಡುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಳಜಿ ವಹಿಸಬೇಕು~ ಎಂದರು.ಇದರ ಜೊತೆಗೆ ಪಟ್ಟಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೂ ಗಮನ ಹರಿಸುವಂತೆ ಅವರು ತಿಳಿಸಿದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಚನ್ನಪ್ಪ ಮಾರಿಹಾಳ ಪ್ರತಿಕ್ರಿಯಿಸಿ, `ಮಲ ಪ್ರಭಾ ನದಿಯಿಂದ ದಕ್ಷಿಣ ಭಾಗಕ್ಕಿರುವ ಹಳ್ಳಿಗಳು ತಾಲ್ಲೂಕು ವ್ಯಾಪ್ತಿಗೆ ಬರುವಂತಾಗಬೇಕು. ಅಗತ್ಯ ಬಿದ್ದರೆ ಧಾರವಾಡ, ಖಾನಾಪುರ ಹಳ್ಳಿಗಳನ್ನೂ ಕಿತ್ತೂರು ತಾಲ್ಲೂಕಿಗೆ ಸೇರಿಸಬೇಕು ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.