ಸೋಮವಾರ, ಮಾರ್ಚ್ 8, 2021
26 °C

ತಾಲ್ಲೂಕು ಗ್ರಂಥಾಲಯ ಶಿಥಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಲ್ಲೂಕು ಗ್ರಂಥಾಲಯ ಶಿಥಿಲ

ಹುಮನಾಬಾದ್:  ಎರಡು ದಶಕಗಳ ಹಿಂದೆ ನಿರ್ಮಿಸಲಾದ ಇಲ್ಲಿನ ತಾಲ್ಲೂಕು ಕೇಂದ್ರ ಗ್ರಂಥಾಲಯ ಶಿಥಿಲಾವಸ್ಥೆಗೆ ತಲುಪಿದೆ.

ಈ ಗ್ರಂಥಾಲಯಕ್ಕೆ ನಿವೇಶನ ಮಂಜೂರು ಮಾಡುವಂತೆ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಅಂದಿನ ಪುರಸಭೆ ಅಧ್ಯಕ್ಷ ವೀರಣ್ಣ ಎಚ್‌.ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿ   ಪರಿಗಣಿಸಿದ ಅಧ್ಯಕ್ಷರು ಕೋರ್ಟ್‌ ಪಕ್ಕದಲ್ಲಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಹತ್ತಿರ 40x60 ಅಳತೆಯ ನಿವೇಶನ ಮಂಜೂರು ಮಾಡಿದ್ದರು.ಗ್ರಂಥಾಲಯ ಇಲಾಖೆ ಅಲ್ಲಿ ಒಂದು ದೊಡ್ಡ ಹಾಲ್‌ ನಿರ್ಮಿಸಿ,  ಓದುಗರಿಗೆ, ಪುಸ್ತಕ ಸಂಗ್ರಹಕ್ಕಾಗಿ ವಿಭಾಗಿಸಿ, ಮಧ್ಯದಲ್ಲಿನ ಸ್ಥಳವನ್ನು ಗ್ರಂಥಾಲಯ ಮೇಲ್ವಿಚಾರಕರಿಗೆ ನಿಗದಿಪಡಿಸಲಾಗಿದೆ. ಇಲ್ಲಿನ ಗ್ರಂಥಾಲಯ ಸಿಬ್ಬಂದಿ ಈಗ ಇರುವ ಸ್ಥಳದಲ್ಲೇ ಚೊಕ್ಕದಾದ ಉದ್ಯಾನ ನಿರ್ಮಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.   ಪ್ರತೀ ವರ್ಷ ಮಳೆಗಾದಲ್ಲಿ ಇಡೀ ಛಾವಣಿ ಸೋರುತ್ತದೆ. ಗೋಡೆಗಳಿಂದ ನೀರು ವಸರುತ್ತದೆ.ಇದರ ಪರಿಣಾಮ ಮೌಲ್ಯಯುತ ಗ್ರಂಥ ಒದ್ದೆಯಾಗುತ್ತಿವೆ. ಓದುಗರ ಸಂಖ್ಯೆಗೆ ತಕ್ಕಷ್ಟು ಸ್ಥಳದ ಜೊತೆಗೆ ಆಸನಗಳ ಸೌಲಭ್ಯ ಕೊರತೆ ಕಾರಣ ಓದುಗರು ಅನಿವಾರ್ಯವಾಗಿ ಗ್ರಂಥಾಲಯ ಪ್ರಾಂಗಣವನ್ನು ಆಶ್ರಯಿಸುತ್ತಾರೆ. ಇದನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ಗ್ರಂಥಾಲಯದ ಕಾಯಂ ಓದುಗರಾದ ಪ್ರೊ.ಮಹಾದೇವಪ್ಪ, ಸಂಗಮೇಶ ಮರೂರ್‌, ನಿವೃತ್ತ ಶಿಕ್ಷಕ ಗುಂಡಪ್ಪ ಕುಂಬಾರ, ವೀರಣ್ಣ ವಾರದ್‌ ಅವರ ಒತ್ತಾಯ.ಪ್ರತ್ಯೇಕ ಕೊಠಡಿ ಸೌಲಭ್ಯವಿಲ್ಲದ ಏಕೈಕ ಕಾರಣ ನಾವು ಓದುವಕ್ಕೆ ಹೋಗುತ್ತಿಲ್ಲ ಎಂದು ಗ್ರಂಥಾಲಯದ ಖಾಯಂ ಸದಸ್ಯತ್ವ ಹೊಂದಿದ ಪ್ರಾಚಾರ್ಯೆ ಮೀನಾಕ್ಷಿ ಜಾಧವ್‌, ಶಕುಂತಲಾ ದೂರಿದರು.ಸಮಸ್ಯೆ ಕುರಿತು ಬೀದರ್‌ ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯ ಅಧಿಕಾರಿ ಅಜಯಕುಮಾರ ಅವರನ್ನು ಸಂಪರ್ಕಿಸಿದಾಗ– ಕಟ್ಟಡ ಶಿಥಿಲಾವಸ್ಥೆ ತಲುಪಿದ್ದಲ್ಲದೇ ಓದುಗರಿಗೆ ಸ್ಥಳದ ಅಭಾವ ಇರುವುದು ವಾಸ್ತವ ಸತ್ಯ.  ಗ್ರಂಥಾಲಯ ಅಭಿವೃದ್ಧಿಗೆ ಕೊರತೆ ಇರುವುದು ಅನುದಾನದ್ದಲ್ಲ ಸ್ಥಳದ್ದು. 371(ಜೆ) ಯೋಜನೆ ಅಡಿಯಲ್ಲಿ ಸರ್ಕಾರ ಕೋಟ್ಯಂತರ ಅನುದಾನ ಒದಗಿಸುತ್ತಿದೆ. ಜಿಲ್ಲೆಯ ಭಾಲ್ಕಿಯಲ್ಲಿ ವಿಶಾಲ ನಿವೇಶನ ಒದಗಿಸಿದ ಕಾರಣ  ಸರ್ಕಾರ ₨ 1.20ಕೋಟಿ ಅನುದಾನ ಮಂಜೂರು ಮಾಡಿದೆ. ಹುಮನಾಬಾದ್‌ನಲ್ಲೂ ಸ್ಥಳ ಒದಗಿಸಿದಲ್ಲಿ ಇಲ್ಲೂ ಖಂಡಿತಾ ಹೈಟೆಕ್‌ ಗ್ರಂಥಾಲಯ ನಿರ್ಮಿಸುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.