ಬುಧವಾರ, ಮೇ 25, 2022
29 °C

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದಚ್ಯುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಚಿಕ್ಕಬಳ್ಳಾಪುರ: ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ಸ್ಥಾನದಿಂದ ಮಂಜುಳಾ ಮಂಜುನಾಥ್  ಪದಚ್ಯುತಗೊಂಡಿದ್ದು, ಉಪಾಧ್ಯಕ್ಷ ವೆಂಕಟ ನಾರಾಯಣಪ್ಪ ಅವರು ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷರ ವಿರುದ್ಧ ಶನಿವಾರ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಮೂಲಕ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು ಎಂದು ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.`ಮಂಜುಳಾ ಮಂಜುನಾಥ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೋರಿ 15 ದಿನಗಳ ಹಿಂದೆಯೇ ತಾಲ್ಲೂಕು ಪಂಚಾಯಿತಿ ಇಒಗೆ ಮನವಿಪತ್ರ ಸಲ್ಲಿಸ ಲಾಗಿತ್ತು. 15 ದಿನಗಳ ತರುವಾಯು ಮಂಜುಳಾ ಅವರು ಸಭೆ ಕರೆಯದಿರುವ ಹಿನ್ನೆಲೆಯಲ್ಲಿ ವೆಂಕಟನಾರಾಯಣಪ್ಪ ಅವರೇ ಶನಿವಾರ ಸಭೆಯನ್ನು ಕರೆದು ಅವಿಶ್ವಾಸ ನಿರ್ಣಯ ಮಂಡಿಸಿದರು. ಮಂಜುಳಾ ಅವರು ಪದಚ್ಯುತಗೊಂಡು ವೆಂಕಟನಾರಯಣಪ್ಪ ಅವರು ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾದರು~ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಮತ್ತೊಬ್ಬ ಅಧ್ಯಕ್ಷರು ಆಯ್ಕೆ ಗೊಳ್ಳುವವರೆಗೆ ವೆಂಕಟನಾರಾ ಯಣಪ್ಪ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದು, ತಾಲ್ಲೂಕು ಪಂಚಾಯಿತಿಯು ಜೆಡಿಎಸ್ ತಕ್ಕೆಗೆ ಬಂದಂತಾಗಿದೆ. ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡದಿರುವ ಆರೋಪದ ಮೇಲೆ ಮಂಜುಳಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಮಂಜುಳಾ ಅವರು ತಮ್ಮ ಹುದ್ದೆಯನ್ನು ತ್ಯಜಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ರಾಜೀನಾಮೆ ಪತ್ರವು ಅಂಗೀಕಾರವಾಗದೇ ಮಾನ್ಯತೆ ಕಳೆದು ಕೊಂಡಿದೆ~ ಎಂದು ಅವರು ತಿಳಿಸಿದರು.ವೆಂಕಟನಾರಾಯಣಪ್ಪ ಮಾತನಾಡಿ, `ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಪಿ.ಎನ್.ಕೇಶವರೆಡ್ಡಿ ಮತ್ತು ಮಂಜುಳಾ ಅವರು ತಮ್ಮ ವಿರುದ್ಧ ಮಾಡಿರುವ ಅರೋಪಗಳಲ್ಲಿ ಹುರುಳಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಂದಿ ರುವ ಅನುದಾನ ಪಂಚಾಯಿತಿ ಕ್ಷೇತ್ರ ಗಳಿಗೆ ಸಮಾನವಾಗಿ ಹಂಚಿಕೆಯಾಗ ಬೇಕು ಎಂದು ಒತ್ತಾಯಿಸಲಾಯಿತೇ ಹೊರತು ಯಾರಿಗೂ ಮಾನಸಿಕ ಕಿರುಕುಳ ನೀಡಿಲ್ಲ~ ಎಂದರು.`ಸರ್ಕಾರದಿಂದ ಬಂದಿರುವ ಒಂದು ಕೋಟಿ ರೂಪಾಯಿ ಅನುದಾನವನ್ನು ಸದ್ಬಳಕೆ ಮಾಡಲಗುವುದು. ಪಂಚಾ ಯಿತಿಯ ವಿವಿಧ ಅಭಿವೃದ್ಧಿ ಕಾರ್ಯ ಗಳಿಗೆ ವಿನಿಯೋಗಿಸ ಲಾಗುವುದು~ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಮುನೇಗೌಡ, ಜೆಡಿಎಸ್ ಮುಖಂಡ ಕೆ.ಆರ್.ರೆಡ್ಡಿ ಇತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.