ತಾಲ್ಲೂಕು ಪಂಚಾಯ್ತಿ ಗದ್ದುಗೆಗೆ ಬಿಜೆಪಿ ಕಸರತ್ತು

7

ತಾಲ್ಲೂಕು ಪಂಚಾಯ್ತಿ ಗದ್ದುಗೆಗೆ ಬಿಜೆಪಿ ಕಸರತ್ತು

Published:
Updated:

ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕು ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಲಿದೆ. 

 

ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 29 ಸದಸ್ಯರು ಪ್ರತಿನಿಧಿಸುವ ಇಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸದ ಕಾರಣ ಮೊದಲ 20ತಿಂಗಳ ಅವಧಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು.ಇದೀಗ ಎರಡನೇ ಅವಧಿಯ 20 ತಿಂಗಳಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಹಾಗಾಗಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಈ ಅವಧಿಯಲ್ಲೂ ಮುಂದುವರಿಯಲಿದೆಯೇ ಎಂದು ಕಾದು ನೋಡಬೇಕಾಗಿದೆ.ಮೊದಲ ಅವಧಿಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಬೋರಮ್ಮ ಅಧ್ಯಕ್ಷರಾಗಿ, ದೇವರಮರಿಕುಂಟೆ ಕ್ಷೇತ್ರದ ಜೆಡಿಎಸ್‌ನ ಸದಸ್ಯ ಎಂ.ಎಸ್. ಮಂಜುನಾಥ್ ಉಪಾಧ್ಯಕ್ಷರಾಗಿ 10 ತಿಂಗಳು ಕಾರ್ಯನಿರ್ವಹಿಸಿದ್ದರು.

ಇನ್ನುಳಿದ 10 ತಿಂಗಳಿಗೆ ಸಾಣೀಕೆರೆ ಕ್ಷೇತ್ರದ ಜೆಡಿಎಸ್‌ನ ಎಸ್. ಹೇಮಲತಾ 5 ತಿಂಗಳು, ಟಿ.ಎನ್. ಕೋಟೆ ಕ್ಷೇತ್ರದ ಜೆಡಿಎಸ್ ಸದಸ್ಯೆ ಜಯಲಕ್ಷ್ಮೀ ಅಧ್ಯಕ್ಷರಾಗಿ ತಲಾ ಐದು ತಿಂಗಳು, ನೇರಲಗುಂಟೆ ಕ್ಷೇತ್ರದ ಜೆ. ತಿಪ್ಪೇಶ್‌ಕುಮಾರ್ 10 ತಿಂಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry