ತಾಲ್ಲೂಕು ಮಟ್ಟದಲ್ಲಿ ‘ಸಕಾಲ’ ಸಹಾಯ ಕೇಂದ್ರ

7

ತಾಲ್ಲೂಕು ಮಟ್ಟದಲ್ಲಿ ‘ಸಕಾಲ’ ಸಹಾಯ ಕೇಂದ್ರ

Published:
Updated:

ಬೆಂಗಳೂರು: ಸಕಾಲ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹೆಲ್ಪ್‌ ಡೆಸ್ಕ್‌ಗಳನ್ನು ಆರಂಭಿಸ ಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.ಸೋಮವಾರ ಇಲ್ಲಿ  ಆಗಸ್ಟ್‌ ತಿಂಗಳ ಸಕಾಲ ವರದಿ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಅವರು, ತಹಶೀಲ್ದಾರ್‌ ಕಚೇರಿಗಳಲ್ಲಿ 177 ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 30 ಸೇರಿದಂತೆ ಒಟ್ಟು 207 ಹೆಲ್ಪ್‌ ಡೆಸ್ಕ್‌ಗಳನ್ನು ತೆರೆಯಲಾಗುವುದು ಎಂದರು.ಆನ್‌ಲೈನ್‌ನಲ್ಲಿ ಈಗ 69 ಸೇವೆಗಳು ಲಭ್ಯವಾಗುತ್ತಿದ್ದು ಬರುವ ದಿನಗಳಲ್ಲಿ ಮತ್ತಷ್ಟು ಸೇವೆಗಳನ್ನು ಇದರ ವ್ಯಾಪ್ತಿಗೆ ತರಲಾಗುವುದು. ಆನ್‌ಲೈನ್‌ ಸೇವೆಯ ಉಪಯೋಗ ಪಡೆಯಲು ಅನುಕೂಲ ವಾಗಲಿ ಎಂಬ ಉದ್ದೇಶದಿಂದ ಹೆಲ್ಪ್‌ ಡೆಸ್ಕ್‌ ತೆರೆಯಲಾಗುತ್ತಿದೆ ಎಂದರು.ಸದ್ಯ 375 ಸೇವೆಗಳು ಸಕಾಲದಡಿ ದೊರೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ 240 ಸೇವೆಗಳನ್ನು ಇದರ ವ್ಯಾಪ್ತಿಗೆ ತರಲಾಗುವುದು. ಕಂದಾಯ, ಸಾರಿಗೆ ಇಲಾಖೆಯಲ್ಲಿ ಸೇವೆಗಳು ದೊರೆಯುವುದು ವಿಳಂಬ ವಾಗುತ್ತಿದೆ. ಸಂಬಂಧಪಟ್ಟ  ಸಚಿವ ರೊಂದಿಗೆ ಚರ್ಚಿಸಲಾಗುವುದು ಎಂದರು.ಪಹಣಿಯನ್ನು ಆನ್‌ಲೈನ್‌ನಲ್ಲೇ ನೋಂದಾಯಿಸಿ,  ವಿಳಂಬವನ್ನು ತಪ್ಪಿಸ ಬಹುದಾಗಿದೆ ಎಂದು ತಿಳಿಸಿದರು. ಆಗಸ್ಟ್‌ ತಿಂಗಳಲ್ಲಿ ಆನ್‌ಲೈನ್‌ ಮೂಲಕ 15,500 ಅರ್ಜಿಗಳನ್ನು ಸ್ವೀಕರಿಸಿದ್ದು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದರು.

ಸಕಾಲದಡಿ ಇದುವರೆಗೆ 3,35,46,826 ಅರ್ಜಿಗಳು ಬಂದಿದ್ದು, 3,26,70,595 ಅರ್ಜಿಗಳು ವಿಲೇವಾರಿಯಾಗಿವೆ. ಉತ್ತರ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು ಕೊನೆಯ ಸ್ಥಾನದಲ್ಲಿದೆ ಎಂದು ತಿಳಿಸಿದರು.ಕೊನೆ ಸ್ಥಾನದಲ್ಲಿದ್ದ ಕೋಲಾರ ಈಗ ಎರಡನೇ ಸ್ಥಾನದಲ್ಲಿದೆ. ಚಾಮರಾಜ ನಗರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಬಳ್ಳಾರಿ 29 ಹಾಗೂ ಬೆಳಗಾವಿ 28ನೇ ಸ್ಥಾನದಲ್ಲಿದೆ. ಸ್ಪರ್ಧಾಮನೋಭಾವ ಬೆಳೆಸುವ ಉದ್ದೇಶದಿಂದ ಈ ಬಾರಿಯಿಂದ ತಾಲ್ಲೂಕುಗಳಿಗೂ ಸ್ಥಾನ ನೀಡಲಾಗುತ್ತಿದೆ. ಗುಡಿಬಂಡೆ ಪ್ರಥಮ, ಕುಮಟಾ 2ನೇ ಹಾಗೂ ಅಂಕೋಲಾ 3ನೇ ಸ್ಥಾನ ಪಡೆದಿವೆ ಎಂದು ಸಕಾಲ ಮಿಷನ್‌ ನಿರ್ದೇಶಕಿ ಶಾಲಿನಿ ರಜನೀಶ್‌ ತಿಳಿಸಿದರು.ಸಾಧನೆ ಪರಾಮರ್ಶೆ: ಸಮರ್ಥನೆ

ಬೆಂಗಳೂರು:
ಸಚಿವರು, ಶಾಸಕರ ಕಾರ್ಯವೈಖರಿ ಬಗ್ಗೆ ಪರಾಮರ್ಶೆ ನಡೆಸುವುದು ತಪ್ಪಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ತಜ್ಞರು ಪರಾಮರ್ಶೆ ಮಾಡುವುದರಿಂದ ಅವರಿಂದ ಸಲಹೆಗಳನ್ನು ಪಡೆಯಲು ಅನುಕೂಲ ವಾಗಲಿದೆ. ಅಲ್ಲದೆ ಬೇರೆ ರಾಜ್ಯಗಳಲ್ಲಿ ಇರುವ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಮರ್ಥಿಸಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry