ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ

7

ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ

Published:
Updated:

ಭಾಲ್ಕಿ: ಶಿಕ್ಷಣ ಇಲಾಖೆಯಿಂದ ತಾಲ್ಲೂಕಿನ ಭಾತಂಬ್ರಾದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಕ್ರೀಡಾಕೂಟವನ್ನು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ದೇಶಪ್ಪ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಿಂದ ವಿದ್ಯಾರ್ಥಿಗಳ ದೈಹಿಕ ಮತ್ತು  ಮಾನಸಿಕ ಆರೋಗ್ಯ ವಿಕಾಸವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಡಿ. ಹುನಗುಂದ ಮಾತನಾಡಿ, ಓದಿನ ಜೊತೆಗೆ ಕ್ರೀಯಾಶೀಲ ಚಟುವಟಿಕೆಗಳಿದ್ದರೆ ಮಕ್ಕಳ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದರು.ಗ್ರಾಪಂ ಅಧ್ಯಕ್ಷೆ ಬಾಲಿಕಾಬಾಯಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಂತಾಬಾಯಿ ಅಣ್ಣಾರಾವ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಮಹಾದೇವ ಬೇಲೂರೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಬಿ. ಗೋಖಲೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಮಲ್ಲಿಕಾರ್ಜುನ ಹಲ್ಮಂಡಗೆ, ತಾಪಂ ಉಪಾಧ್ಯಕ್ಷ ಮಾದಪ್ಪ ಬಿರಾದಾರ,  ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಾಂಗದ ವಾಡೇಕರ್, ಬಿ.ಆರ್‌ಸಿ ಸಮನ್ವಯಾಧಿಕಾರಿ ಪ್ರಕಾಶ ಡೋಂಗ್ರೆ, ದಿನಕರ್ ಸಾಯಗಾಂವಕರ್, ದೈ.ಶಿ, ಸಂಘದ ಅಧ್ಯಕ್ಷ ಹಣಮಂತ ಕಾರಾಮುಂಗೆ, ಶಿಕ್ಷಕರ ಸಂಘದ ಅಧ್ಯಕ್ಷ ಷಡಕ್ಷರಿ ಸ್ವಾಮಿ, ಡಿ.ಡಿ. ಸಿಂಧೆ, ಡಾ. ಕಾಶಿನಾಥ ಚಲವಾ, ಕಸಾಪ ಅಧ್ಯಕ್ಷ ಸುಭಾಷ ಹುಲಸೂರೆ, ದಿಲೀಪ ಸಿಂಧೆ, ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry