ತಾಲ್ಲೂಕು ಮಟ್ಟದ ಪೈಕಾ ಕ್ರೀಡಾಕೂಟಕ್ಕೆ ಚಾಲನೆ

7

ತಾಲ್ಲೂಕು ಮಟ್ಟದ ಪೈಕಾ ಕ್ರೀಡಾಕೂಟಕ್ಕೆ ಚಾಲನೆ

Published:
Updated:

ಶಿರಸಿ: ಗ್ರಾಮೀಣ ಪ್ರತಿಭೆಗಳಿಗೆ ಆಯೋಜಿಸಿರುವ ಪೈಕಾ ಕ್ರೀಡಾಕೂಟದಲ್ಲಿ ಹಳ್ಳಿ ಭಾಗದ 300ರಷ್ಟು ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದಾರೆ. ಓಟ, ಉದ್ದ ಜಿಗಿತ, ವಾಲಿಬಾಲ್, ಖೋಖೋ, ಕಬ್ಬಡ್ಡಿ ಆಟಗಳಲ್ಲಿ ಉತ್ಸಾಹದಿಂದ ಸ್ಪರ್ಧೆ ಒಡ್ಡುತ್ತಿದ್ದಾರೆ.ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲಿ 23 ಗ್ರಾ.ಪಂ.ಗಳ 16 ವರ್ಷ ಒಳಗಿನ ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಆಯಾ ಗ್ರಾ.ಪಂ.ನಲ್ಲಿ ವಿಜೇತರಾದ ಸ್ಪರ್ಧಿಗಳ ಸಂಖ್ಯೆ ಆಧರಿಸಿ ಅತಿ ಹೆಚ್ಚು ಅಂಕ ಪಡೆದ ಮೊದಲ ಮೂರು ಗ್ರಾ.ಪಂ.ಗಳಿಗೆ ಕ್ರಮವಾಗಿ ರೂ.20ಸಾವಿರ, ರೂ.12ಸಾವಿರ ಮತ್ತು ರೂ.4ಸಾವಿರ ಬಹುಮಾನ ನೀಡಲಾಗುತ್ತದೆ. ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಕ್ರೀಡಾಕೂಟವನ್ನು ಶುಕ್ರವಾರ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ನಾಯ್ಕ ಉದ್ಘಾಟಿಸಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಚಿಕ್ಕಂದಿನಿಂದಲೇ ಉತ್ತಮ ಗುಣ ಬೆಳೆಸಿಕೊಳ್ಳಬೇಕು ಗುಟಕಾ, ಪಾನ್ ಮಸಾಲಾದಂತಹ ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳನ್ನು ತಿನ್ನಬಾರದು.  ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ದುಶ್ಚಟಗಳಿಂದ ದೂರ ಇರಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಿಂದಿನ ವರ್ಷದ ಪೈಕಾ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಸಿದ 45 ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಲಾಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ಉಪಾಧ್ಯಕ್ಷೆ ಸೀತು ಮರಾಠಿ, ನಗರಸಭೆ ಅಧ್ಯಕ್ಷ ರವಿ ಚಂದಾವರ, ಜಿ.ಪಂ. ಸದಸ್ಯರಾದ ಚಂದ್ರಪ್ಪ ಚನ್ನಯ್ಯ, ಉಷಾ ಹೆಗಡೆ, ತಾ.ಪಂ. ಸದಸ್ಯರಾದ ಗುರುಪಾದ ಹೆಗಡೆ, ನೇತ್ರಾವತಿ ಹೆಗಡೆ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry