ತಾಲ್ಲೂಕು ಮಟ್ಟದ ಯುವಜನ ಮೇಳ 26ರಂದು

7

ತಾಲ್ಲೂಕು ಮಟ್ಟದ ಯುವಜನ ಮೇಳ 26ರಂದು

Published:
Updated:

ರೋಣ:  ತಾಲ್ಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ  ತಾಲ್ಲೂಕು ಯುವಕ ಸಂಘಗಳ ಒಕ್ಕೂಟ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಯುವಜನ ಮೇಳ ಇದೇ 26ರಂದು ಸಂಜೆ 6 ಗಂಟೆಗೆ ಜರುಗಲಿದೆ.ಯುವಜನ ಮೇಳದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ನೆರವೇರಿಸುವರು. ಸಾನ್ನಿಧ್ಯವನ್ನು ಷಡಕ್ಷರಯ್ಯ ಹಿರೇಮಠ ವಹಿಸುವರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ದೇವಕ್ಕವ್ವ ಕುರಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬಸವೇಶ್ವರ ಯುವಕ ಮಂಡಳ ಗೌರವಾಧ್ಯಕ್ಷ ನಿಂಗಪ್ಪ ಹುಲ್ಲೂರ, ತಾ.ಪಂ  ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಜಿ.ಪಂ ಸದಸ್ಯ ಡಾ.ಆರ್.ಬಿ.ಬಸವರಡ್ಡೇರ, ತಾ.ಪಂ ಸದಸ್ಯ  ಧರ್ಮಣ್ಣ ಭೂಸಗೌಡ್ರ, ಬಸವಂತಪ್ಪ ತಳವಾರ ವೀರಯ್ಯ ನೆಲ್ಲೂರ, ಲಕ್ಷ್ಮಣ್ಣ ಹನಸಿ, ಭರಮಗೌಡ ಪಾಟೀ,  ಎಸ್.ಎಸ್.  ಕಡಿವಾಲ, ಎಸ್.ಎಂ.ರುದ್ರಸ್ವಾಮಿ, ಕೆ.ವಿ.ಪಾಟೀ, ಕೆ.ಎಚ್. ನಾಗನೂರ, ಬಸಯ್ಯಸ್ವಾಮಿ ನೀಲಕಂಠಮಠ, ಡಾ.ಆನಂದ ಇನಾಮದಾರ ಪಸ್ಥಿತರಿರುವರು.ತಾಲ್ಲೂಕಿನ ಕೊತಬಾಳದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ   ಅರುಣೋದಯ ಕಲಾ ತಂಡದ ಮುಖ್ಯಸ್ಥರಾದ ಕಲಾವಿದ ಶಂಕ್ರಪ್ಪ ಸಂಕಣ್ಣವರನ್ನು ಸನ್ಮಾನಿಸಲಾಗುವುದು ಎಂದು ಬಸವೇಶ್ವರ ಯುವಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry