ತಾಲ್ಲೂಕು ಯುವಜನ ಮೇಳ 23ರಿಂದ

7

ತಾಲ್ಲೂಕು ಯುವಜನ ಮೇಳ 23ರಿಂದ

Published:
Updated:

ಅಂಕೋಲಾ: ತಾಲ್ಲೂಕು ಮಟ್ಟದ ಯುವಜನ ಮೇಳವನ್ನು ಸಮೀಪದ ಶೆಟಗೇರಿಯ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ದಿ. 23 ಮತ್ತು 24 ರಂದು ಏರ್ಪಡಿಸಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ  ಕಾರ್ಯನಿರ್ವಹಣಾಧಿಕಾರಿ ಬಿ.ಬಿ. ತೀರ್ಥ ಹೇಳಿದರು. ಗುರುವಾರ ತಾ.ಪಂ. ಸಭಾ ಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಮತ್ತು ಯುವತಿ ಮಂಡಳಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಯುವಜನ ಸೇವಾ ಅಧಿಕಾರಿ ಜಗದೀಶ ಜಿ. ನಾಯಕ ಯುವಜನ ಮೇಳವನ್ನು ಜನರ ಉತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದರು. ಮಹಾಗಣಪತಿ ದೇವಸ್ಥಾನದ ಟ್ರಸ್ಟಿ ನಾರಾಯಣ ಬಿ. ನಾಯಕ ಮತ್ತು ಶೆಟಗೇರಿ ಗ್ರಾ.ಪಂ. ಅಧ್ಯಕ್ಷ ದೇವಣ್ಣ ಬಿ. ನಾಯಕ ಯುವಜನ ಮೇಳದ ಯಶಸ್ಸಿಗೆ ಸಹಕರಿಸುವುದಾಗಿ ತಿಳಿಸಿದರು.ಜಿ.ಪಂ. ಉಪಾಧ್ಯಕ್ಷ ಉದಯ ಡೊಂಗಾ ನಾಯ್ಕ ಬುಧವಾರ ಸಂಜೆ 5 ಗಂಟೆಗೆ ಉದ್ಘಾಟಿಸಲಿದ್ದು, ಉದ್ಯಮಿ ಸತೀಶ ಸೈಲ್, ತಹಸೀಲ್ದಾರ ಡಾ. ಉದಯಕುಮಾರ ಶೆಟ್ಟಿ, ಮಾಜಿ ಜಿ.ಪಂ. ಅಧ್ಯಕ್ಷ ರಮಾನಂದ ನಾಯಕ, ಪ್ರೊ. ಕೆ.ವಿ. ನಾಯಕ, ಪ.ಪಂ. ಅಧ್ಯಕ್ಷ ಭಾಸ್ಕರ್ ನಾರ್ವೇಕರ ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಸುಭಾಸ್ ಕಾರೇಬೈಲ್ ಹೇಳಿದರು. ಈ ಸಂದರ್ಭದಲ್ಲಿ  ಸಂಜೀವ ಬಿ. ನಾಯಕ, ರತೀಶ ನಾಯಕ, ಗಿರೀಶ ನಾಯಕ, ಸಂದೇಶ ನಾಯಕ, ಸುನೀಲ ನಾಯಕ, ಸಂದೀಪ ಮೋಹನ ಗಾಂವಕರ, ಅಮರ ನಾಯಕ ಉಪಸ್ಥಿತರಿದ್ದರು.ಸ್ಪರ್ಧೆಗಳು : ಭಾವಗೀತೆ, ಲಾವಣಿ, ವೀರಗಾಸೆ, ಡೊಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಏಕಪಾತ್ರಾಭಿನಯ, ಗೀಗೀ ಪದ, ರಂಗ ಗೀತೆ, ಜಾನಪದ ನೃತ್ಯ, ಜನಪದ ಗೀತೆ, ಭಜನೆ, ಚರ್ಮವಾದ್ಯ ಇತ್ಯಾದಿ ಸ್ಪರ್ಧೆಗಳು ಯುವಕ ಯುವತಿಯರಿಗೆ ಪ್ರತ್ಯೇಕವಾಗಿ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry