ಮಂಗಳವಾರ, ಜೂನ್ 22, 2021
29 °C

ತಾಲ್ಲೂಕು ರಚನೆಗೆ ಆಗ್ರಹ: ಹೆದ್ದಾರಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲನಗರ: ತಾಲ್ಲೂಕು ರಚನೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಜನ ಸಾಮಾನ್ಯರ ವೇದಿಕೆ ನೇತೃತ್ವದಲ್ಲಿ ಬೀದರ್‌–ನಾಂದೇಡ್‌ ಅಂತರ ರಾಜ್ಯ ಹೆದ್ದಾರಿ ತಡೆ ನಡೆಸಲಾಯಿತು.ಅಲ್ಲಂಪ್ರಭು ವೃತ್ತದಲ್ಲಿ ಜಮಾ­ಯಿಸಿದ ವೇದಿಕೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನೂತನ ತಾಲ್ಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಬಸವರಾಜ ಪಾಟೀಲ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಕಮಲನಗರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ­ರುವುದನ್ನು ಈಗಿನ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗುತ್ತಿಲ್ಲ. ಘೋಷಿತ 43 ತಾಲ್ಲೂಕುಗಳ ರಾಜ್ಯ ಹೋರಾಟ ಸಮಿತಿ ರಚಿಸಿಕೊಂಡು ಮಾ. 7 ರಂದು ಬೆಂಗಳೂರಿನಲ್ಲಿ ಸಭೆ ನಡೆಸ­ಲಾಗುವುದು. ರಾಜ್ಯದಾದ್ಯಂತ ಏಕ­ಕಾಲಕ್ಕೆ ಪ್ರತಿಭಟನೆ, ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಸಾಹಿತಿ ಸಿ.ಎಂ.ಹಿರೇಮಠ ಮಾತನಾಡಿ, ಕಮಲನಗರ ತಾಲ್ಲೂಕು ರಚನೆ, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಖಾಲಿ ಹುದ್ದೆ ಭರ್ತಿ, ಸರ್ಕಾರಿ ಪ್ರೌಢಶಾಲೆ ಮಂಜೂರು, ನೂತನ ಐಟಿಐ ಕಾಲೇಜು ಆರಂಭ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.ತಹಶೀಲ್ದಾರ್‌ ಎಚ್‌.ವೆಂಕಣ್ಣ ಮಾತನಾಡಿ, ವಿವಿಧ ಬೇಡಿಕೆ ಈಡೇರಿಕೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ವೈಜಿನಾಥ ವಡ್ಡೆ, ದಿಲೀಪ ಮುಧಾಳೆ, ಬಾಲಾಜಿ ತೇಲಂಗ್‌, ಸಂತೋಷ ಬಿರಾದಾರ್‌,  ಶಿವಾಜಿ ಕಾಳೆ, ಸಿದ್ರಾಮ ಟೊಣ್ಣೆ, ವೈಜಿನಾಥ ಭವರಾ, ಮಡಿವಾಳಪ್ಪಾ ನಿಲಂಗೆ, ಬಾ.ನಾ. ಸೊಲ್ಲಾಪುರೆ, ಅರವಿಂದ ಕುಲಕರ್ಣಿ, ಮೀನಾಕ್ಷಿ ಪಾಂಚಾಳ್‌, ಕಲ್ಯಾಣರಾವ ಬಿರಾದಾರ್‌, ರಾಜಕುಮಾರ ಭೈರೆ ಇದ್ದರು.ಹೆದ್ದಾರಿ ತಡೆಯಿಂದ ಬೀದರ್‌–ನಾಂದೇಡ್‌ ಅಂತರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ­ವಾಯಿತು. ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.