ಗುರುವಾರ , ಮೇ 6, 2021
23 °C

ತಾಲ್ ಚೆಸ್ ಟೂರ್ನಿ : ಆನಂದ್‌ಗೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ತಾಲ್ ಮೆಮೋರಿಯಲ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಇಟಲಿಯ ಫ್ಯಾಬಿಯಾನೊ ಕರುವಾನಾ ಎದುರು ಸೋಲು ಕಂಡರು.ವಿಶ್ವದ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರು ತಮ್ಮ ಪ್ರಬಲ ಎದುರಾಳಿ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಮಣಿಸಿದರು.ಅಜರ್‌ಬೈಜಾನಿನ ಶಕ್ರಿಯಾರ್ ಮಮೆಡ್ಯಾರೊವ್ ಅವರು ಅಮೆರಿಕದ ಹಿಕಾರು ನಕಾಮುರಾ  ಅವರನ್ನು ಸೋಲಿಸಿ, ಕಾರ್ಲ್‌ಸನ್ ಹಾಗೂ ಕರುವಾನಾ ಜತೆಗೆ ಜಂಟಿ ಅಗ್ರ ಸ್ಥಾನದಲ್ಲಿದ್ದಾರೆ.ಇನ್ನು ಎಂಟು ಸುತ್ತುಗಳು ಬಾಕಿ ಇದ್ದು, ಆನಂದ್, ಕ್ರಾಮ್ನಿಕ್ ಹಾಗೂ ನಕಾಮುರಾ ಪಾಯಿಂಟ್ ಪಟ್ಟಿಯಲ್ಲಿ ಕೆಳಗಿದ್ದಾರೆ. ಆದರೆ ಮುಂದಿನ ಸುತ್ತಿನಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.