ತಾಳಿಕೋಟೆಗೆ ಈಜುಕೊಳ ಅಗತ್ಯ

7

ತಾಳಿಕೋಟೆಗೆ ಈಜುಕೊಳ ಅಗತ್ಯ

Published:
Updated:
ತಾಳಿಕೋಟೆಗೆ ಈಜುಕೊಳ ಅಗತ್ಯ

ತಾಳಿಕೋಟೆ: ಪಟ್ಟಣದಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಜನತೆ ನೆರಳನ್ನಾಶ್ರಯಿಸಿ ಮರಗಳತ್ತ ಹೋಗುತ್ತಿದ್ದಾರೆ. ಶೈಕ್ಷಣಿಕ ವರ್ಷ ಕೊನೆಗೊಂಡು ಪರೀಕ್ಷೆ ಮುಗಿಸಿದ ಚಿಣ್ಣರು ಬಿಸಿಲನ್ನು ಲೆಕ್ಕಿಸದೆ ಚೆಂಡು ಬ್ಯಾಟು ಹಿಡಿದು ಮೈದಾನಗಳಿಗೆ ನುಗ್ಗು ತ್ತಿದ್ದಾರೆ.  ಈಜು ಪ್ರಿಯರು ಮಾತ್ರ ಪಟ್ಟಣದಲ್ಲಿ ಸರಿಯಾದ ಈಜುಕೊಳವಿಲ್ಲದೆ ಬಳಲಿದ್ದಾರೆ.ಬೇಸಿಗೆಯ ಬಿಸಿಲಿಂದ ತಂಪಾಗಲು, ಮಕ್ಕಳಿಗೆ ಈಜು ಕಲಿಸಲು ಬೇಸಿಗೆ ಸರಿಯಾದ ಸಮಯ. ಆದರೆ ಪಟ್ಟಣದಲ್ಲಿ ಈಜುಕೊಳದ್ದೆ ಕೊರತೆ. ಪಟ್ಟಣದ ಪಕ್ಕದಲ್ಲಿಯೇ ಡೋಣಿ ನದಿ ಹರಿದಿದ್ದರೂ ಬೇಸಿಗೆ ಬಿಸಿಲಿಗೆ ಬಸವಳಿದು  ಅವಳೂ ಕರಗಿ ತೆವಳುತ್ತಿದ್ದಾಳೆ. ಸುತ್ತಮುತ್ತ ಹೇಳಿಕೊಳ್ಳುವಂಥ ಭಾವಿಗಳೂ ಇಲ್ಲ. ಈಜು ಕಲಿಯಬೇಕೆಂದರೆ ಪಟ್ಟಣದಿಂದ ಆರು ಕಿಲೋ ಮೀಟರ್ ದೂರದ ಮಿಣಜಿಗಿ ಪಡೆಗಳನ್ನು ಆಶ್ರಯಿಸಬೇಕು. ಅಷ್ಟು ದೂರಕ್ಕೆ ಹೋಗಲು  ದ್ವಿಚಕ್ರವಾಹನ ಹೊಂದಿದವರಿಗೆ ಮಾತ್ರ ಸಾಧ್ಯ. ಅವರೂ ನಿತ್ಯಷ್ಟು ದೂರ ಹೋಗಲು ಬೇಸರಿಸಿ ಕೊಳ್ಳುತ್ತಾರೆ.ಇಂಥ ತೊಂದರೆಗಳಿಂದ ಹೊರತಾಗಿ ಪಕ್ಕದಲ್ಲಿಯೇ ಇರುವ ಕೃಷಿ ಮಾರುಕಟ್ಟೆ ಆವರಣದ ಹಿಂದಿನ ಜಮೀನಲ್ಲಿ ಒಂದು ಸುಂದರವಾದ ವಿಶಾಲವಾದ ಬಾವಿ ಇದೆ. ಒಳಗೆ ಇಳಿಯಲು ಮೆಟ್ಟಿಲು ಸುಂದರ ಕಮಾನು, ಜೊತೆಗೆ ನೀರು ಇವೆ. ಆದರೆ ನೀರನ್ನು ಬಳಸದೆ ಇರುವುದರಿಂದ ನೀರು ಮಲಿನವಾಗಿದೆ. ಪಟ್ಟಣದಲ್ಲಿ ಜಾತ್ರೆಗಳು ಬಂದಾಗ ಜಾನುವಾರು ಜಾತ್ರ ಸಮಯದಲ್ಲಿ ಇದರ ಬಳಕೆ ಮಾಡಿದರೂ ಅವು ಸ್ನಾನಕ್ಕೆ ಯೋಗ್ಯವಾದವುಗಳಲ್ಲ.ಸುಸಜ್ಜಿತವಾದ ಕಲ್ಲುಕಟ್ಟಡ ಹೊಂದಿರುವ ಈ ಬಾವಿಯನ್ನು ಪುರುಜ್ಜೀವನಗೊಳಿಸಬೇಕಾಗಿದೆ. ಬಾವಿಯ ಸುತ್ತಲೂ ಬೆಳೆದಿರುವ ಮುಳ್ಳು ಕಂಟಿಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು. ಕೊಚ್ಚೆ ನೀರನ್ನು ಮೇಲೆತ್ತಿದರೆ ಜಾನಕಿ ಹಳ್ಳದ ಬದಿಯಲ್ಲಿ ಇರುವುದರಿಂದ ಸೆಲೆ ತಾನಾಗಿಯೇ ಉಕ್ಕುತ್ತದೆ. ಸ್ವಲ್ಪ ಮಾರ್ಪಾಡಾದರೂ  ಪಟ್ಟಣದಲ್ಲಿ ಕಡಿಮೆ ಖರ್ಚಿನಲ್ಲಿ ಒಂದು ಸುಂದರ  ಈಜುಕೊಳ ನಾಗರಿಕರಿಗೆ ಲಭ್ಯವಾಗುತ್ತದೆ.ಪುರಸಭೆಗೆ ಒಂದು ಈಜುಕೊಳ ನಿರ್ಮಿಸಿದ ಹೆಮ್ಮೆ ಸಿಗುತ್ತದೆ.  ಜೊತೆಗೆ ಆದಾಯವನ್ನೂ ತರುತ್ತದೆ. ಪುರಸಭೆ ಈ ದಿಸೆಯಲ್ಲಿ ಚಿಂತನೆ ನಡೆಸಿ ಈಜು ಪ್ರಿಯರಿಗೆ, ಈಜು ಕಲಿಯುವವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎನ್ನುವುದು ಚೈತನ್ಯ ಸ್ನೇಹಿತರ ಬಳಗ, ಕರವೇ, ಫ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್, ನಾಡು ನುಡಿಬಳಗ, ತಾಳಿಕೋಟೆ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘಗಳ ಆಶಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry